ಬಿಲಗುಂದಿ ಗ್ರಾಮಕ್ಕೆ ಬಸ್ಸಿನ ಸೌಲಭ್ಯ ಒದಗಿಸಿ

ಕಲಬುರಗಿ:ಸೆ.20:ಕಲಬುರಗಿ ದಿಂದ ಆಳಂದ ತಾಲೂಕಿನ ಬಿಲಗುಂದಿ ಗ್ರಾಮಕ್ಕೆ ಬಸ್ಸಿನ ಸೌಲಭ್ಯ ಒದಗಿಸಬೇಕೆಂದು ಆಳಂದ ಭಾರತಿಯ ಬೌದ್ದ ಮಹಾಸಭಾ ತಾಲೂಕ ಸಮಿತಿಯ ಅಧ್ಯಕ್ಷ ವಿಜಯಕುಮಾರ ಎನ್. ಬಿಲಗುಂದಿ ನೇತೃತ್ವದಲ್ಲಿ ಕೆಕೆಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬಿಲಗುಂದಿ ಗ್ರಾಮದ ಸಾರ್ವಜನಿಕರು ವೈಯಕ್ತಿಕ ಕೆಲಸದ ನಿಮಿತ್ಯ ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ತರಕಾರಿ ವ್ಯಾಪರಸ್ಥರು ದಿನನಿತ್ಯ ಬಿಲಗುಂದಿ ಗ್ರಾಮದಿಂದ ಕಲಬುರಗಿಗೆ ಹೋಗುವುದು ತುಂಬಾ ಅವಶ್ಯಕವಾಗಿರುತ್ತದೆ. ಹೀಗಾಗಿ ಗ್ರಾಮಕ್ಕೆ ಯಾವುದೇ ರೀತಿ ಬಸ್ಸಿನ ಸೌಲಭ್ಯವಿರುವುದಿಲ್ಲ. ಇದರಿಂದ ಸಾರ್ವಜನಿಕರು ಮತ್ತು ತರಕಾರಿ ವ್ಯಾಪರಸ್ಥರು ತುಂಬಾ ಕಷ್ಟಪಡುತ್ತಿದ್ದಾರೆ.
ಆದಕಾರಣ ತಾವುಗಳು ಸದರಿ ಬಿಲಗುಂದಿ ಗ್ರಾಮಸ್ಥರ ಮನವಿಯನ್ನು ಪರಿಗಣಿಸಿ ಕೂಡಲೇ ಬಿಲಗುಂದಿ ಗ್ರಾಮಕ್ಕೆ ಬೆಳಗ್ಗೆ ಮತ್ತು ಸಾಯಾಂಕಾಲ ಕಲಬುರಗಿಯಿಂದ ಕಮಲಾನಗರ ಮಾರ್ಗವಾಗಿ ಬಿಲಗುಂದಿ ಗ್ರಾಮಕ್ಕೆ ಬಸ್ಸಿನ ಸೌಲಭ್ಯ ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.