ಬಿರುಗಾಳಿ ಸಮೇತ ಸುರಿದ ಮಳೆಗೆ ಹತ್ತಾರು ಸಾವಿರ ಬಾಳೆ ಗಿಡಗಳು ನಾಶ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.14- ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸುರಿದ ಮಳೆಗೆ ಕೆಲ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಬಾಳೆ ಬೆಳೆಗಾರರು ಕಣ್ಣೀರು ಸುರಿಸುವಂತಾಗಿದೆ. ಶನಿವಾರ ಸುರಿದ ಬಿರುಗಾಳಿ ಸಮೇತ ಸುರಿದ ಮಳೆಗೆ ಹತ್ತಾರು ಸಾವಿರ ಬಾಳೆ ಗಿಡಗಳು ನೆಲಕಚ್ಚಿದ್ದು ಲಕ್ಷಾಂತರ ರೂಪಾಯಿಆದಾಯದ ನಿರೀಕ್ಷೆಯಲ್ಲಿದ್ದರೈತರಿಗೆ ಮಳೆ ತಣ್ಣೀರೆರಚಿದೆ.
ಚಾಮರಾಜನಗರ ತಾಲೂಕಿನ ದೇವರಾಜಪುರ, ಬ್ಯಾಡಮೂಡ್ಲು, ಉತ್ತುವಳ್ಳಿ, ದೊಡ್ಡಮೋಳೆ, ಡೊಳ್ಳಿಪುರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ನೂರಾರುಎಕರೆ ಬಾಳೆ ನೆಲಕಚ್ಚಿದೆ. ಇನ್ನು 15 ದಿನಗಳಲ್ಲಿ ಬಾಳೆ ಕಟಾವಿಗೆ ಬಂದಿದ್ದು ಬಂಪರ್ ಲಾಭದಲ್ಲಿರೈತರು ನಿರೀಕ್ಷೆಯಲ್ಲಿದ್ದರು.
ಸದ್ಯ ಮಾರುಕಟ್ಟೆಯಲ್ಲಿ ನೇಂದ್ರ ಬಾಳೆಗೆ 40 ರೂ. ಏಲಕ್ಕಿ ಬಾಳೆಗೆ 45, ಚಂದ್ರಬಾಳೆಗೆ 35 ರೂ. ದರವಿದೆ. ಏನಿಲ್ಲವೆಂದರೂ 2 ಎಕರೆಯಲ್ಲಿ ಬೆಳೆದ ರೈತ 12-15 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದ. ಈ ಹೊತ್ತಲ್ಲೇ ಮಳೆ ಗಾಳಿಗೆ ಬಾಳೆ ಬೆಳೆ ನೆಲ ಕಚ್ಚಿದ್ದು ಕೈಗೆ ಬಂದತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ.
ರೈತನಕಣ್ಣೀರು: ಲಕ್ಷಾಂತರರೂಪಾಯಿ ಸಾಲ ಮಾಡಿಎರಡುಎಕರೆಯಲ್ಲಿ 4500 ಬಾಳೆ ಗಿಡಗಳನ್ನು ಹಾಕಿದ್ದೆನು. ಉತ್ತಮವಾಗಿ ಬಂದಿದ್ದ ನೇಂದ್ರ ಬಾಳೆ ಫಸಲನ್ನು ಮುಂದಿನ 8 ದಿನದಲ್ಲಿ ಕಟಾವು ಮಾಡಬೇಕು ಅಂದು ಕೊಂಡಿದ್ದೆ. ಶನಿವಾರ ಗಾಳಿ-ಮಳೆ ಬರಸಿಡಿಲಿನ ರೀತಿ ಅಪ್ಪಳಿಸಿದ್ದು 4 ಸಾವಿರ ಬಾಳೆ ಗಿಡಗಳು ನೆಲಕಚ್ಚಿವೆ. 17-20 ಲಕ್ಷಆದಾಯ ನಿರೀಕ್ಷೆ ಇಟ್ಟುಕೊಂಡಿದ್ದೆವು. ನಮಗೆ ಅಪಾರ ನಷ್ಟವಾಗಿದೆ ಎಂದು ದೇವರಾಜಪುರದ ರೈತ ಬಸವರಾಜು ಮಾಧ್ಯಮದವರ ಎದುರು ರೈತ ಕಣ್ಣೀರು ಹಾಕಿದರು.
6 ಸಾವಿರರೂ. ಪರಿಹಾರ ಬೇಡ:
ಕುರುಬ ಸಮುದಾಯದ ಮುಖಂಡ ರಾಜಶೇಖರ್ ಮಾಧ್ಯಮದವರೊಂದಿಗೆ ಮಾತನಾಡಿ, ಬಾಳೆ ಬೆಳೆಯಲು ರೈತಎಕರೆಗೆಕನಿಷ್ಠ ಅಂದ್ರೂ 1 ಲಕ್ಷರೂ. ಖರ್ಚು ಮಾಡಿರುತ್ತಾನೆ. ಸರ್ಕಾರಎಕರೆಗೆ 6 ಸಾವಿರ ಬೆಳೆಹಾನಿ ಪರಿಹಾರಕೊಡುವುದು ತೀರಾ ಅವೈಜ್ಞಾನಿಕವಾಗಿದೆ. ರೈತರನ್ನು ಸಾಲದ ಸುಳಿಯಿಂದ ಸಂರಕ್ಷಿಸುವುದು ಸರ್ಕಾರದ ಹೊಣೆ. ಸರ್ಕಾರ 1 ಎಕರೆಗೆ 1 ಲಕ್ಷರೂ. ಪರಿಹಾರಕೊಡಬೇಕು ಎಂದು ಒತ್ತಾಯಿಸಿದರು.
ಬಿರುಗಾಳಿ ಸಹಿತ ಸುರಿದ ಮಳೆಗೆ ಚಾಮರಾಜನಗರಗಡಿಜಿಲ್ಲೆಯಲ್ಲಿ ಹತ್ತಾರು ಸಾವಿರ ಬಾಳೆ ಗಿಡಗಳು ನೆಲಕ್ಕುರಳಿವೆ. ರೈತರಿಗೆಅಪಾರ ನಷ್ಟವಾಗಿದ್ದು, ಸರ್ಕಾರ ಪರಿಹಾರ ನೀಡುತ್ತದೆಯೋಕಾದು ನೋಡಬೇಕು.