ಬಿರುಗಾಳಿ ಸಮೇತ ಬಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

ವಾಡಿ: ಮೇ.30:ಬಾರಿ ಬಿರುಗಾಳಿ ಸಮೇತ ಸುರಿದ ಮಳೆ ಮನೆಗಳಿಗೆ ನೀರು ನುಗ್ಗಿದೆ. ಮನೆಯಿಂದ ನೀರು ತೆಗೆಯಲು ಜಾಗರಣೆ ಮಾಡಿದ ಪ್ರಸಂಗ ನಡೆದಿದೆ. ಕೆಲವೊಂದು ಕಡೆ ಗಾಳಿಗೆ ಮರಗಳು ನೆಲಕ್ಕೆ ಉರುಳಿವೆ. ಹನುಮಾನ ನಗರದಲ್ಲಿರುವ ಟೆಂಗಿನ ಮರಕ್ಕೆ ಸಿಡಿಲು ಅಪಳಿಸಿದ ಪರಿಣಾಮ ತೆಂಗಿನಕಾಯಿ ಬಿಟ್ಟ ಮರ ಸುಟ್ಟಿದೆ.

ಬೆಳಗ್ಗೆಯಿಂದ ಕೆಂಡದಂತೆ ಬೆಂಕಿ ಕಾರುತ್ತಿದ್ದ ಸೂರ್ಯ ಮಧ್ಯಾಹ್ನದ ನಂತರ ಮೋಡವಾಗಿ ಪರಿವರ್ತನೆಯಾಗಿದ್ದಾನೆ, ನಂತರ ಜೋರಾಗಿ ಗಾಳಿ ಬಿಸಿದೆ. ಗುಡುಗು ಸಿಡಿಲಿನ ಅರ್ಭಟದೊಂದಿಗೆ ಧಾರಾಕಾರ ಮಳೆ ಸುರಿದಿದೆ. ರೈತರ ಚಟುವಟಿಕೆ ಆರಂಭಗೊಳ್ಳಲು ಉತ್ತಮ ರೀತಿ ಮಳೆಯಾಗಿದೆ. ಮಳೆ ರೈತನ ಮೊಗದಲ್ಲಿ ಅಲ್ಪಹರ್ಷ ಮೂಡಿಸಿದೆ. ಬಿರುಗಾಳಿ ಸಮೇತ ಸುರಿದ ನಿರಂತರ ಮಳೆಯಿಂದ ಹಲವು ಗ್ರಾಮಗಳಲ್ಲಿ Pರೆಂಟ್ ಕೈಕೊಟ್ಟಿದೆ. ಇನ್ನು ಕೆಲವು ಕಡೆ ದುರಸ್ಥಿ ಕೆಲಸವು ನಡೆದಿವೆ.