ಬಿರುಗಾಳಿ ಮಳೆಗೆ ಧರೆಗುರುಳಿದ ಮರಗಳು

ತಾಳಿಕೊಟೆ:ಮೇ.26: ಗುರುವಾರ ಮದ್ಯಾಹ್ನ ಬೀಸಿದ ಬಿರುಗಾಳಿ ಸಹೇತ ಮಳೆಗೆ ಪಟ್ಟಣದ ಕೆಲವೆಡೆ ಮರಗಳು ನೆಲಕ್ಕೆ ಉರುಳಿ ಬಿದ್ದ ಘಟನೆಗಳು ಜರುಗಿದ್ದು ಯಾವುದೇ ತರಹದ ಹಾನಿ ಸಂಬವಿಸಿಲ್ಲಾ.

ಪಟ್ಟಣದ ಪ್ರವಾಸಿ ಮಂದಿರದ ಒಳಗೆ ಇದ್ದ ಎರಡು ಬೃಹತ್ ಆಹಾರದ ಮರಗಳು ಉರುಳಿ ಬಿದ್ದಿವೆ ಉದ್ಯಾನವನ ರಕ್ಷಣೆಗೆ ಹಾಕಲಾದ ಕಬ್ಬಿಣದ ಬೇಲಿಗಳು ಬೆಂಡಾಗಿವೆ ಸದರಿ ಮರಗಳು ಪ್ರವಾಸಿ ಮಂದಿರದ ಮುಖ್ಯ ದ್ವಾರದ ರಸ್ತೆಗೆ ಉರುಳಿದ್ದರಿಂದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು ಬಿದ್ದ ಮರಗಳನ್ನು ಕತ್ತರಿಸಿ ತೆರವುಗೊಳಿಸಿದರು. ಮತ್ತು ರಾಜವಾಡೆಯ ಭೀಮನಭಾವಿ ಹತ್ತಿರ ಒಳಗೊಂಡು ಕೆಲವುಕಡೆಗಳಲ್ಲಿ ಮರಗಳು ರಬಸದ ಗಾಳಿ ಮಳೆಗೆ ಉರುಳಿ ಬಿದಿದ್ದು ಅವುಗಳನ್ನು ಸಹ ನಾಗರಿಕರು ತೆರವುಗೊಳಿಸಿದ್ದಾರೆ.