
ಜಗಳೂರು.ಮೇ.24; ತಾಲೂಕಿನಾದ್ಯಂತ ಸುರಿದ ಬಿರುಗಾಳಿ ಮಳೆಯಿಂದ ರೈತರಿಗೆ ಅಪಾರ ನಷ್ಟವಾಗಿದ್ದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ನೇತೃತ್ವದ ಅಧಿಕಾರಿಗಳು ಅನೇಕ ಪ್ರದೇಶಗಳಿಗೆ ಭೇಟಿ ನೀಡಿ, ಗ್ರಾಮಲೆಕ್ಕಿಗರು, ಸಹಾಯಕರಿಂದ ಮಾಹಿತಿ ಪಡೆದಿದ್ದು ಅಂದಾಜು 20 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಕಸಬಾ ಹೋಬಳಿಯಲ್ಲಿ ಎರಡು ಹೆಕ್ಟೇರ್ ಅಡಿಕೆ ಬೆಳೆನಾಶವಾಗಿದೆ. 9 ಮನೆಗಳಿಗೆ ಭಾಗಶಃ ಹಾನಿಯಾಗಿವೆ.ಬಿಳಿಚೋಡು ಹೋಬಳಿ ಯಲ್ಲಿ 2 ಹೆಕ್ಟೇರ್ ಬಾಳೆಗಿಡ, 1 ಹೆಕ್ಟೇರ್ ಪಪ್ಪಾಯಿ, 2 ಮನೆಗಳಿಗೆ ಹಾನಿಯಾಗಿವೆ, ಸೊಕ್ಕೆ ಹೋಬಳಿಯಲ್ಲಿ 2 ಹೆಕ್ಟೇರ್ ಅಡಿಕೆ, 5 ಹೆಕ್ಟೇರ್ ಬಾಳೆ ಹಾನಿಗೊಳಗಾಗಿವೆ.ಚಿಕ್ಕ ಉಜ್ಜಿನಿ ಗ್ರಾಮದ ಚಂದ್ರ ಶೇಖರ್ ಸ್ವಾಮಿ ಎಂಬ ರೈತನ ಎತ್ತು ಸಿಡಿಲು ಬಡಿದು ಮೃತ ಪಟ್ಟಿದೆ ಎಂದು ತಿಳಿಸಿದ್ದಾರೆ.ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೇಟಿ:-ಬಿರುಗಾಳಿ ಸಹಿತ ಭಾರಿ ಮಳೆಗೆ ದರೆಗುರುಳಿದ ಬಾಳೆ ಬೆಳೆ ವೀಕ್ಷಣೆಗೆ ಬೆಂಗಳೂರು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ವಿಶ್ವನಾಥ್, ತೋಟಗಾರಿಕೆ ಇಲಾಖೆ ಸಹಾಯಕ ಹಿರಿಯ ನಿರ್ದೇಶಕ (ಎಸ್‍ಡಿ ಎಚ್) ವೆಂಕಟೇಶ್ ಮೂರ್ತಿ ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ವೆಂಕಟೇಶ್ ನಾಯ್ಕ್ ನೇತೃತ್ವದ ತಂಡ ತಾಲೂಕಿನ ಮಠದದ್ಯಾಮೇನಹಳ್ಳಿ ಗ್ರಾಮದ ಎಂ.ಪಿ.ತಿಪ್ಪೇಸ್ವಾಮಿ ಸೇರಿದಂತೆ ನಷ್ಟ ಅನುಭವಿಸುತ್ತಿರುವ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಅಧಿಕಾರಿಗಳಿಗೆ ರೈತ ಎಂ.ಪಿ.ತಿಪ್ಪೇಸ್ವಾಮಿ ಮಳೆಯಿಂದ ಆದ ನಷ್ಟದ ಬಗ್ಗೆ ವಿವರಿಸಿದರು. ಕಷ್ಟ ಪಟ್ಟು ಬೆಳೆದ ಬಾಳೆ ಬಿರುಗಾಳಿಗೆ ಸಿಲುಕಿ ನೆಲಕ್ಕು ರುಳಿದೆಲಕ್ಷ ಲಕ್ಷ ಖರ್ಚು ಮಾಡಿ ಬೆಳೆಸಲಾಗಿತ್ತು. ಆದರೆ ಅಕಾ ಲಿಕ ಮಳೆ ಯಿಂದ ಆದ ನಷ್ಟ ಹೇಳತೀರದಾಗಿದೆ. ದಯಮಾಡಿ ಇಲಾಖೆ ಅಧಿಕಾರಿಗಳು ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.ಜಂಟಿ ನಿರ್ದೇಶಕ ಡಾ.ವಿಶ್ವನಾಥ್ ಮಾತನಾಡಿ, ಕ್ಷೇತ್ರದಲ್ಲಿ ಆಗಿ ರುವ ನಷ್ಟದ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ರೈತರಿಗೆ ಆದ ನಷ್ಟದ ವರದಿ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿ ಸಾಧ್ಯವಾದಷ್ಟು ಬೇಗ ರೈತರ ಖಾತೆಗಳಿಗೆ ಬೆಳೆ ನಷ್ಟ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.ಸೊಕ್ಕೆ,ಗುರುಸಿದ್ದಾಪುರ, ಮಲೆ ಮಾಚಿಕೆರೆ ಗ್ರಾಮಗಳಿಗೆ ಮಳೆ ಯಿಂದ ಆದ ನಷ್ಟದ ಬಗ್ಗೆ ತೋಟಗಾರಿಕೆ ಅಧಿಕಾರಿಗಳು ತೆರಳಿ ರೈತರಿಂದ ಮಾಹಿತಿ ಪಡೆದರು.ಭಾನುವಾರ ಸಂಜೆಯಿಂದ ಸುರಿದ ಭಾರಿ ಮಳೆಯಿಂದ ಉಂಟಾಗಿ ರುವ ಪ್ರಕೃತಿ ವಿಕೋಪ ನಿರ್ವಹಣೆಗೆ ತಹಶಿಲ್ದಾರ್ ಜಿ.ಸಂತೋಷ್ ಕುಮಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕರಾದ ಬಿ.ದೇವೇಂದ್ರಪ್ಪ ತಿಳಿಸಿದರು.ದೂರವಾಣಿ ಯಲ್ಲಿ ಮಾಹಿತಿ ನೀಡಿದ ಅವರು, ಮಠದದ್ಯಾಮೇನಹಳ್ಳಿ, ಸೊಕ್ಕೆ, ಗುರುಸಿದ್ದಾಪುರ, ಮಲೆ ಮಾಚಿಕೆರೆ ಗ್ರಾಮಗಳಲ್ಲಿ ಮಳೆಯಿಂದ ಬಾಳೆ, ಅಡಕೆ, ಪಪ್ಪಾಯ ಗಿಡಗಳು ನೆಲಕ್ಕುರುಳಿರುವ ಬಗ್ಗೆ ಮಾಧ್ಯಮಗಳಿಂದ ತಿಳಿಯಿತು ತಕ್ಷಣವೇ ತಹಶಿಲ್ದಾರ್ ಜಿ. ಸಂತೋಷ್ ಕುಮಾರ್ ಅವರಿಗೆ ದೂರವಾಣಿಯಲ್ಲಿ ಮಾತನಾಡಿ ವರದಿ ನೀಡುವಂತೆ ಮಾಹಿತಿ ನೀಡಿದ್ದೇನೆ ತೋಟಗಾರಿಕೆ ಸಹಾ ಯಕ ನಿರ್ದೇಶಕರಾದ ವೆಂಕ ಟೇಶ್ ಮೂರ್ತಿ, ಬೆಸ್ಕಾಂ ಎಇಇ ರಾಮಚಂದ್ರಪ್ಪ ಅವರಿಗೂ ಮಾತನಾಡಿ ಯಾವುದೇ ಸಮಸ್ಯೆ ಯಾಗದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ ಎಂದು ಸಂಜೆವಾಣಿ ದಿನಪತ್ರಿಕೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ