ಬಿಯು ಸಂಖ್ಯೆಗಾಗಿ ರೋಗಿಗಳ ಪರದಾಟ

ಬೆಂಗಳೂರು, ಏ.೨೬- ಕೋವಿಡ್-೧೯ ಸಂಬಂಧ ಹಲವು ಬಾರಿ ಬಿಯು ಸಂಖ್ಯೆಯ ಕುರಿತು ದೂರುಗಳು ಸಲ್ಲಿಸಿದರೂ, ಪಾಲಿಕೆ ಎಚ್ಚೆತ್ತಿಕೊಂಡಿಲ್ಲ.ಇದರ ಪರಿಣಾಮ ಹಲವು ರೋಗಗಿಳು ಮನೆಯಲ್ಲಿಯೇ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ಕುರಿತು ಮಹಿಳೆವೊಬ್ಬಕೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಾಬೀತುಪಡಿಸಿದ್ದು, ಬಿಯು ಸಂಖ್ಯೆ ಇಲ್ಲದೆ, ಎದುರಾಗಿರುವ ಸಂಕಷ್ಟವನ್ನು ಹೇಳಿಕೊಂಡಿದ್ದಾಳೆ.
ಸರಿಯಾದ ಸಮಯಕ್ಕೆ ಸಿಬ್ಬಂದಿ ಕೋವಿಡ್ ರಿಪೋರ್ಟ್ ನೀಡುತ್ತಿಲ್ಲ. ಎರಡು ದಿನಗಳ ಹಿಂದೆ ನಗರದ ಮತ್ತಿಕೆರೆಯ ಬಿಬಿಎಂಪಿ ಕಚೇರಿ ವ್ಯಾಪ್ತಿಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಲಾಗಿತ್ತು.
ಮೂರು ದಿನಗಳ ಕಾಲ ಕಳೆದರೂ ಕೋವಿಡ್ ವರದಿ ಕೈತಲುಪಿಲ್ಲ. ಬಿಯು ಸಂಖ್ಯೆ ಇಲ್ಲದೇ ಆಸ್ಪತ್ರೆ ಸಿಬ್ಬಂದಿ ದಾಖಲಸಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸದ್ಯ ಮಹಿಳೆ ಸೋಂಕಿತೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಇವರನ್ನು ಉಳಿಸಲು ಮನೆಯ ಸದಸ್ಯರು ಹೋರಾಟ ಮುಂದುವರೆಸಿದ್ದಾರೆ.