ಬಿಯುಎಂಎಸ್ ಫಲಿತಾಂಶ ಪ್ರಕಟಃ ವಿದ್ಯಾರ್ಥಿನಿಯರ ಮೇಲುಗೈ

ವಿಜಯಪುರ, ಎ.24-ಬೆಂಗಳೂರಿನ ರಾಜೀವಗಾಂದಿ ಆರೋಗ್ಯ ಮತ್ತು ವಿಜ್ಞಾನ ವಿವಿ ಬಿಯುಎಂಎಸ್ ಫಲಿತಾಂಶ ಪ್ರಕಟಿಸಿದ್ದು, ಮೂರು ವರ್ಷದ ಫಲಿತಾಂಶ ಬಿಡುಗಡೆ ಮಾಡಿದೆ.
ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಲುಕ್ಮಾನ ಯುನಾನಿ ಮೆಡಿಕಲ್ ಕಾಲೇಜಿನ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಥಮ ವರ್ಷದ ಫಲಿತಾಂಶದಲ್ಲಿ ಫಬಿಯಾ ಖಾಜಿ ಪ್ರತಿಶತ 76.95 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ. ಅದರಂತೆ ಎರಡನೇ ವರ್ಷದ ಫಲಿತಾಂಶದಲ್ಲಿ ಹುಮಾ ಅಹಮ್ಮದ ಶಾಬಿರ ಪ್ರತಿಶತ 77.90 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅದರಂತೆ ಮೂರನೇ ವರ್ಷದ ಫಲಿತಾಂಶದಲ್ಲಿ ಸುಮಯ್ಯ ಮುಲ್ಲಾ ಪ್ರತಿಶತ 81.29 ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಒಟ್ಟಾರೆಯಾಗಿ ಕಾಲೇಜಿನ ಪ್ರಥಮ ವರ್ಷದ ಫಲಿತಾಂಶ 86.44% ರಷ್ಟಾಗಿದ್ದು, ಎರಡನೇ ವರ್ಷದ ಫಲಿತಾಂಶ 92.85% ರಷ್ಟಾಗಿದೆ. ಹಾಗೆಯೇ ಮೂರನೇ ವರ್ಷದ ಫಲಿತಾಂಶ 91.37% ರಷ್ಟಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಸ್.ಎ ಪುಣೇಕರ, ಪ್ರಧಾನ ಕಾರ್ಯದರ್ಶಿ ಎ.ಎಸ್ ಪಾಟೀಲ, ನಿರ್ದೇಶದಕರಾದ ಸಲಾವುದ್ದೀನ ಪುಣೇಕರ, ಪ್ರಾಚಾರ್ಯ ಡಾ. ಅಖೀಲ್ ಖಾದ್ರಿ ಉಪಪ್ರಚಾರ್ಯೆ ಡಾ. ಶಹನಾಝ ಬಾನು ಬೋಧಕ ಸಿಬ್ಬಂಧಿ ಅಭಿನಂದಿಸಿದೆ.