ಬಿಯರ ಸಾಗಾಣಿಕೆ ಮಾಡುತ್ತಿದವನ ಮೇಲೆ ಅಬಕಾರಿ ದಾಳಿ

ಯಾದಗಿರಿ : ಮಾ.29 : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ 2024 ಮಾರ್ಚ್ 27 ರಿಂದ ಪ್ರತಿದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.

 ಈ ನಿಟ್ಟಿನಲ್ಲಿ ದಿನ ಸಾರ್ವತ್ರೀಕ ಲೋಕಸಭೆ ಚುನಾವಣೆ 2024ರ ಪ್ರಯುಕ್ತ, ಮಾನ್ಯ ಅಬಕಾರಿ ಜಂಟಿ ಆಯುಕ್ತರು ಕಲಬುರಗಿ ವಿಭಾಗ ಕಲಬುರಗಿ (ಜಾ&ತ) ರವರ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು ಯಾದಗಿರಿ ರವರ ನಿರ್ದೇಶನದಂತೆ ಮತ್ತು ಮಾನ್ಯ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಶಹಾಪುರ ರವರ ಮಾರ್ಗದರ್ಶನದಂತೆ ಮತ್ತು ಮಾನ್ಯ ಅಬಕಾರಿ ನಿರೀಕ್ಷಕರು ವಲಯ ಶಹಾಪೂರ ರವರ ನೇತೃತ್ವದಲ್ಲಿ ನಾನು ಹಾಗೂ ಸಿಬ್ಬಂದಿಗಳೊಂದಿಗೆ ಕೂಡಿಕೊಂಡು ಖಚಿತ ಬಾತ್ಮೀಯ ಮೇರೆಗೆ ಶಹಾಪೂರ ತಾಲ್ಲೂಕಿನ ಹತ್ತಿಗೂಡುರ ಕ್ರಾಸ್ ಹತ್ತೀರ ರಸ್ತೆಗಾವಲು ನಡೆಸಿದಾಗ ಕಪ್ಪು ಬಣ್ಣದ 150 ಸಿ ಸಿ ಬಜಾಜ್ ಪಲ್ಸ್ರ್  ದ್ವೀ ಚಕ್ರ ವಾಹನ ಸಂಖ್ಯೆ:ಟಿಎಸ್-08-ಹೆಚ್ ಡಿ-9694 ನೇದ್ದರಲ್ಲಿ ಅಕ್ರಮವಾಗಿ ಮಾರಾಟದ ಉದ್ದೇಶದಿಂದ 17.280 ಲೀ ಮದ್ಯ ಹಾಗೂ 15.840 ಲೀ ಬಿಯರನ್ನು ಸಾಗಾಣಿಕೆ ಮಾಡುತ್ತೀರುವುದು ಕಂಡುಬಂದಿರುತ್ತದೆ. ಪ್ರಯುಕ್ತ, ಸದರಿ ಪ್ರಕಾಶ ತಂದೆ ಈರಣ್ಣ ಗುತ್ತೆದಾರ ವ.35 ಸಾ.ಕೊಂಗಂಡಿ ತಾ.ಶಹಾಪೂರ ಜಿ.ಯಾದಗಿರ ಎಂಬಾತನನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.