ಬಿಬಿಸಿ ಕಚೇರಿ ಮೇಲಿನ ದಾಳಿ ದಮನಕಾರಿ ಪ್ರವೃತ್ತಿ: ಕೇಂದ್ರ ಸರ್ಕಾರದ ವಿರುದ್ದ ರಾಹುಲ್ ವಾಗ್ದಾಳಿ

ಲಂಡನ್, ಮಾ. 5 -ಭಾರತದಾದ್ಯಂತ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ – ಬಿಬಿಸಿ ಕಚೇರಿಗಳಲ್ಲಿ ಇತ್ತೀಚೆಗೆ ನಡೆಸಿದ ದಾಳಿಯನ್ನು “ದಮನ” ಕಾರಿ ಮತ್ತು ಧ್ವನಿಯನ್ನು ಹತ್ತಿಕ್ಕುವ ಪ್ರಕ್ರಿಯೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇರ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಏನೇ ನಡೆದರೂ “ಹೊಸ ಐಡಿಯಾ ಆಫ್ ಇಂಡಿಯಾ” ಅಡಿಯಲ್ಲಿ ಭಾರತ “ಮೌನ” ಇರಬೇಕೆಂದು ಬಿಜೆಪಿ ಬಯಸುತ್ತದೆ ಎಂದು ಆರೋಪಿಸಿದ್ದಾರೆ.

ಲಂಡನ್‌ನಲ್ಲಿ ಭಾರತೀಯ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಿಬಿಸಿ ಕಚೇರಿ ಮೇಲಿನ ದಾಳಿ ಮಾಡಿರುವ ಕೇಂದ್ರ ಸರ್ಕಾರ ಕ್ರಮದ ವಿರುದ್ದ ವಾಗ್ದಾಳಿ ನಡೆಸಿದರು.

ಭಾರತ್ ಜೋಡೋ ಯಾತ್ರೆ ಹಿಂದಿನ ಆಲೋಚನೆಯು ಧ್ವನಿಯ ಅಭಿವ್ಯಕ್ತಿಯಾಗಿದೆ. ಆದರೆ ದೇಶಾದ್ಯಂತ ಧ್ವನಿ ನಿಗ್ರಹ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ಭಾರತದಲ್ಲಿ ಏನು ನಡೆಯುತ್ತಿದೆ, ಎಲ್ಲರಿಗೂ ತಿಳಿದಿದೆ, ಪತ್ರಕರ್ತರು ಹೆದರುವಸ್ಥಿತಿ ನಿರ್ಮಾಣ ಮಾಡಲಾಗಿದೆ.ಬೆದರಿಕೆ ಹಾಕುತ್ತಾರೆ. ಮತ್ತು ಕೇಂದ್ರ ಸರ್ಕಾರವನ್ನು ಹೊಗಳುವ ಪತ್ರಕರ್ತರಿಗೆ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

“ಬಿಬಿಸಿ, ಸರ್ಕಾರದ ವಿರುದ್ಧ ಬರೆಯುವುದನ್ನು ನಿಲ್ಲಿಸಿದರೆ, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ, ಎಲ್ಲಾ ಪ್ರಕರಣಗಳು ಮಾಯವಾಗುತ್ತವೆ, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ. ಹಾಗಾಗಿ ಇದು ಭಾರತದ ಹೊಸ ಐಡಿಯಾ, ಭಾರತ ಮೌನವಾಗಿರಬೇಕೆಂದು ಬಿಜೆಪಿ ಬಯಸುತ್ತದೆ ಎಂದು ದೂರಿದ್ದಾರೆ.

ದಲಿತರು, ಕೆಳಜಾತಿಗಳು, ಆದಿವಾಸಿಗಳು, ಮಾಧ್ಯಮಗಳ ಮೌನವನ್ನು ಬಯಸುತ್ತಾರೆ. ಏಕೆಂದರೆ ಅವರು ಭಾರತವನ್ನು ತೆಗೆದುಕೊಂಡು ಅದನ್ನು ತಮ್ಮ ಆತ್ಮೀಯ ಸ್ನೇಹಿತರಿಗೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬಾಕ್ಸ್

ಸಂಪತ್ತು ಇಬ್ಬರಿಗೆ ನೀಡುವ ಹುನ್ನಾರ

ಜನರ ಗಮನ ಬೇರೆ ಕಡೆ ತಿರುಗಿಸಿ ತದನಂತರ ಭಾರತದ ಸಂಪತ್ತನ್ನು ಇಬ್ಬರಿಗೆ ಹಸ್ತಾಂತರಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆ ಎಂದಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಜನರನ್ನು ವಿಚಲಿತಗೊಳಿಸಿ, ತದನಂತರ ಭಾರತದ ಸಂಪತ್ತನ್ನು ಇಬ್ಬರು, ಮೂರು, ನಾಲ್ಕು, ಐದು ದೊಡ್ಡ ಜನರಿಗೆ ಹಸ್ತಾಂತರಿಸಿ. ಅಂದರೆ ನಾವು ಇದನ್ನು ನೋಡಿದ್ದೇವೆ, ನಾವು ಇದನ್ನು ಮೊದಲೇ ನೋಡಿದ್ದೇವೆ ಎಂದು ಅವರು ಆರೋಪಿಸಿದ್ದಾರೆ