ಬಿಬಿಎನ್‍ಎಲ್-ಬಿಎಸ್‍ಎನ್‍ಎಲ್ ವಿಲೀನ: ಪುನಶ್ಚೇತನಕ್ಕೆ 1.64 ಲಕ್ಷ ಕೋಟಿಗೆ ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ,ಜು.27- ಸರ್ಕಾರಿ ಸಾಮ್ಯದ ಭಾರತ್ ಬ್ರಾಂಡ್ ಬ್ಯಾಂಡ್ ನೆಟ್ ವರ್ಕ್ ಲಿಮಿಟೆಡ್ -ಬಿಬಿಎನ್‍ಎಲ್ ಮತ್ತು ಭಾರತ್ ಸಂಚಾರ್ ಸೇವಾ ನಿಗಮ- ಬಿಎಸ್‍ಎನ್‍ಎಲ್ ಅನ್ನು ವಿಲೀನಗೊಳಿಸಲು ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.

ಜೊತೆಗೆ ಬಿಎಸ್‍ಎನ್‍ಎಲ್‍ಗೆ 1.64 ಲಕ್ಷ ಕೋಟಿ ರೂಪಾಯಿ ಮೊತ್ತದ ಪುನರುಜ್ಜೀವನ ಪ್ಯಾಕೇಜ್‍ಗೆ ನೀಡಲೂ ಕೂಡ ಸಚಿವ ಸಂಪುಟ ಸಮ್ಮತಿ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಬಿಎಸ್‍ಎನ್ ಎಲ್ ಮತ್ತು ಬಿಬಿಎನ್‍ಎಲ್ ವಿಲೀನದಿಂದ ದೇಶದ 1.85 ಲಕ್ಷ ಗ್ರಾಮ ಪಂಚಾಯತ್ಗಳಲ್ಲಿ 5.67 ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಅನ್ನು ಹೆಚ್ಚುವರಿಯಾಗಿ ಪಡೆಯಲು ಸಹಕಾರಿಯಾಗಲಿದೆ, ಪ್ರಸ್ತುತ, ಇದು 6.83 ಲಕ್ಷ ಕಿಲೋಮೀಟರ್‍ಗಳಷ್ಟು ಆಪ್ಟಿಕಲ್ ಫೈಬರ್ ಕೇಬಲ್ ಜಾಲವನ್ನು ಹೊಂದಿದೆ ಎಂದು ಹೇಳಿದ್ದಾರೆ.

ಬಿಎಸ್‍ಎನ್ ಎಲ್ ಆಸ್ತಿಗಳ ಮಾಲೀಕತ್ವ ಸರ್ಕಾರದ ಬಳಿ ಇರುತ್ತದೆ. ಬಿಬಿಎನ್‍ಎಲ್ 200 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ. ಅವರನ್ನು ಬಿಎಸ್‍ಎನ್ ಎಲ್ ನಲ್ಲಿ ವಿಲೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಯುನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್ ಮೂಲಕ ದೇಶದ ಎಲ್ಲಾ ಹಳ್ಳಿಗಳಲ್ಲಿ 4ಜಿ ಮೊಬೈಲ್ ಸೇವೆಗಳ ಸ್ಯಾಚುರೇಶನ್ ಯೋಜನೆಗೆ ಒಪ್ಪಿಗೆ ನೀಡಿದ್ದು ಇದಕ್ಕಾಗಿ ಅಂದಾಜು ವೆಚ್ಚ 26,316 ಕೋಟಿ ರೂಪಾಯಿ ಆಗಿದೆ ಎಂದು ಹೇಳಿದ್ದಾರೆ.

ಮಹತ್ವಾಕಾಂಕ್ಷೆಯ ಭಾರತ್ ನೆಟ್ ಯೋಜನೆಯನ್ನು ಕಾರ್ಯಗತಗೊಳಿಸಲು ರಚಿಸಲಾದ ವಿಶೇಷ ಉದ್ದೇಶದ ವಾಹನ ಬಿಬಿಎನ್‍ಎಲ್ ಅನ್ನು2022 ಏಪ್ರಿಲ್‍ನಲ್ಲಿ ಸರ್ಕಾರ ಘೋಷಿಸಿತ್ತು.