ಬಿಬಿಎಂಪಿ ಪ್ರವೇಶ ನಿರ್ಬಂಧ

ಬೆಂಗಳೂರು, ಏ.೨೧- ಕೋವಿಡ್ ಸೋಂಕಿನ ಭೀತಿ ಮನೆ ಮಾಡಿರುವ ನಡುವೆ ಬಿಬಿಎಂಪಿ ಕೇಂದ್ರ ಕಚೇರಿಯ ಪ್ರವೇಶವನ್ನು ಸಾರ್ವಜನಿಕರಿಗೆ ಅನೌಪಚಾರಿಕ ನಿರ್ಬಂಧ ಹೇರಲಾಗಿದೆ.
ಬಿಬಿಎಂಪಿ ಸಿಬ್ಬಂದಿ, ಅಧಿಕಾರಿಗಳು ಹಾಗೂ ಮಾಧ್ಯಮದವರನ್ನು ಹೊರತುಪಡಿಸಿ ಇನ್ನುಳಿದ ಸಾರ್ವಜನಿಕರಿಗೆ ಈ ನಿರ್ಬಂಧ ಅನ್ವಯವಾಗಲಿದೆ.ಅಲ್ಲದೆ, ಈ ಮೊದಲು ಸಾರ್ವಜನಿಕರು ಯಾವುದೇ ಸಂದರ್ಭದಲ್ಲಾದರೂ ಪಾಲಿಕೆ ಪ್ರವೇಶಿಸಬಹುದಿತ್ತು.
ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಇದೀಗ ನಿಗದಿತ ಸಮಯದಲ್ಲಿ ಅಂದರೆ ಮಧ್ಯಾಹ್ನ ೩ ರಿಂದ ಸಂಜೆ ೫ರವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಎಲ್ಲಾ ಸುರಕ್ಷತಾ ಕ್ರಮಗಳನ್ನ ಪಾಲಿಸಲೇಬೇಕು.
ಇನ್ನು, ಈ ನಿರ್ಬಂಧದ ಕುರಿತು ಪಾಲಿಕೆ ಯಾವುದೇ ರೀತಿಯ ಅಧಿಕೃತ ಆದೇಶ ಅಥವಾ ಪ್ರಕಟಣೆ ಹೊರಡಿಸಿಲ್ಲ. ಕೊರೊನಾ ಹೆಚ್ಚಳದ ಬೆನ್ನಲ್ಲೇ ಸಾರ್ವಜನಿಕರ ಪ್ರವೇಶ ತಡೆಗೆ ನಾನಾ ಕಸರತ್ತುಗಳನ್ನು ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡುತ್ತಿದ್ದು, ಬಾಗಿಲಿಗೆ ಟೇಪ್ ಹಾಕುವುದು ಹಾಗೂ ಮಧ್ಯಾಹ್ನ ೩ರಿಂದ ಸಂಜೆ ೫ರವರೆಗೆ ಮಾತ್ರ ಪ್ರವೇಶ ಎಂಬ ಸಂದೇಶದ ಪ್ರತಿಗಳನ್ನು ಎಲ್ಲೆಡೆ ಅಂಟಿಸಿರುವ ದೃಶ್ಯ ಕಂಡಿತು.