ಬಿಬಿಎಂಪಿ ನೂತನ ಆಯುಕ್ತರಾಗಿ ಗೌರವ್ ಗುಪ್ತ

ಬೆಂಗಳೂರು, ಮಾ.31- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರನ್ನಾಗಿ ಗೌರವ್ ಗುಪ್ತ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಸದ್ಯ ಬಿಬಿಎಂಪಿ ಆಡಳಿತಾಧಿಕಾರಿಯಾಗಿರುವ ಗೌರವ್ ಗುಪ್ತ ಅವರನ್ನೇ ಆಯುಕ್ತರಾಗಿಯೂ ನೇಮಿಸಿದ್ದು, ನಿರ್ಗಮಿತ ಆಯುಕ್ತ ಮಂಜುನಾಥ ಪ್ರಸಾದ್ ಅವರು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸ್ಥಾನಕ್ಕೆ ವರ್ಗಾವಣೆ ಆಗಿದ್ದು, ಗುರುವಾರ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಇನ್ನು, ಗೌರವ್‍ಗುಪ್ತ ಅವರ ವರ್ಗಾವಣೆಯಿಂದ ತೆರವಾಗುವ ಆಡಳಿತಾಧಿಕಾರಿ ಹುದ್ದೆಗೆ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್‍ಸಿಂಗ್ ಅವರು ನೇಮಕವಾಗಿದ್ದಾರೆ.