ಬಿಬಿಎಂಪಿ ಚುನಾವಣೆ: ವಿಚಾರಣೆ ಮುಂದೂಡಿದ ಕೋರ್ಟ್

ಬೆಂಗಳೂರು, ನ.20-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ಕೋರಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿದಾರರು ಮತ್ತು ಚುನಾವಣಾ ಆಯೋಗದ ವಾದ ಆಲಿಸಿದೆ.

ಆದರೆ, ಸರ್ಕಾರದ ಪರ ವಕೀಲರಾದ ಎಜಿ ಪ್ರಭುಲಿಂಗ್ ನಾವದಗಿ ಸಮಯ ಕೇಳಿದ ಹಿನ್ನೆಲೆ ಮನವಿ ಪುರಸ್ಕರಿಸಿ ವಿಚಾರಣೆಯನ್ನು ಇದೇ ತಿಂಗಳ‌ 25ಕ್ಕೆ ಮುಂದೂಡಿದೆ.