ಬಿಬಿಎಂಪಿ ಚುನಾವಣೆಗೆ ತಯಾರಾಗಿದ್ದೇವೆ:ಸಿದ್ದರಾಮಯ್ಯ

ಬೆಂಗಳೂರು, ಆ.4- ನ್ಯಾಯಾಲಯ ಬಹುತೇಕ ಬಿಬಿಎಂಪಿ ಚುನಾವಣೆ ಕೈಗೊಳ್ಳಲು ಸೂಚಿಸುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ನಾವು ಚುನಾವಣೆ ಮಾಡಲು ತಯಾರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

12 ವಾರಗಳೊಳಗೆ ವಾರ್ಡ್ ವಿಂಗಡನೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಅದಾದ ನಂತರ ನ್ಯಾಯಾಲಯ ಬಹುತೇಕ ಬಿಬಿಎಂಪಿ ಚುನಾವಣೆ ಕೈಗೊಳ್ಳಲು ಸೂಚಿಸುತ್ತದೆ. ಹಾಗಾಗಿ ನಾವು ಚುನಾವಣೆ ಮಾಡಲು ತಯಾರಾಗಿದ್ದೇವೆ ಎಂದರು.