ಬಿಪಿನ್ ರಾವತ್ ಹಾಗೂ ಇತರೆ ಸೇನಾಧಿಕಾರಿಗಳ ಅಕಾಲಿಕ ನಿಧನಕ್ಕೆ: ಅಷ್ಠಗಿ ಶೋಕ

ಕಲಬುರಗಿ,ಡಿ.08:ದೇಶದ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಸೇನಾಪಡೆಯ ಇತರೆ 11 ಅಧಿಕಾರಿಗಳು ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿರುವುದು ಮನಸ್ಸಿಗೆ ನೋವು ತಂದಿದ್ದು, ಇದು ನಮ್ಮ ರಾಷ್ಟಕ್ಕೆ ತುಂಬಲಾರದ ನಷ್ಟ ಎಂದು ಬಿಜೆಪಿ ರಾಜ್ಯ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಶೋಕ ವ್ಯಕ್ತಪಡಿಸಿದ್ದಾರೆ.

ದೇಶ ಸೇವೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ, ಹುತಾತ್ಮರಾಗಿರುವ ಅಧಿಕಾರಿಗಳ ಕುಟುಂಬದೊಂದಿಗೆ ಇಡೀ ದೇಶವಿದೆ.
ಹುತಾತ್ಮರ ಆತ್ಮಕ್ಕೆ ಸದ್ಗತಿ ದೊರಯಲಿ ಎಂದು ಅಂಬಾರಾಯ ಅಷ್ಠಗಿ ಪ್ರಾರ್ಥಿಸಿದ್ದಾರೆ.