ಬಿಪಿಎಲ್ ಕುಟುಂಬಗಳಿಗೆ 10 ಸಾ. ರೂ.ಸಹಾಯಧನಕ್ಕೆ ಆಗ್ರಹ

ಕಲಬುರಗಿ ಮೇ 16: ಲಾಕ್‍ಡೌನ್ ನಿಂದ ಕಂಗೆಟ್ಟು ಹೋಗಿರುವ ಬಿಪಿಎಲ್ ಕುಟುಂಬಗಳಿಗೆ 10 ಸಾವಿರ ರೂ. ಸಹಾಯಧನ ನೀಡುವಂತೆ ಆಮ್ ಆದ್ಮಿ ಪಾರ್ಟಿ ಕಲಬುರಗಿ ಜಿಲ್ಲಾ ಘಟಕ ಸರಕಾರವನ್ನು ಆಗ್ರಹಿಸಿದೆ
ಕೊರೋನಾ ದಿಂದ ಜೀವಹಾನಿ ಆದ ಬಡ ಕುಟುಂಬಗಳಿಗೆ ಕನಿಷ್ಟ 5 ಲಕ್ಷ ರೂ ಪರಿಹಾರ ನೀಡಬೇಕು.ಎಲ್ಲ ಊರುಗಳಲ್ಲಿ ಕೊರೋನಾ ಕೇರ್ ಸೆಂಟರ್,ಮತ್ತು ಆಕ್ಸಿಜನ್ ಸಹಿತ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸಬೇಕು.ಎಲ್ಲ ವಯೋಮಾನದವರಿಗೆ ಸರ್ಕಾರವೇ ಉಚಿತವಾಗಿ ಲಸಿಕೆ ನೀಡಬೇಕು.ಎಲ್ಲ ಕುಟುಂಬಗಳಿಗೆ ಸಮಗ್ರ ಪಡಿತರ ಕಿಟ್ ವಿತರಿಸಬೇಕು ಎಂದು ಜಿಲ್ಲಾ ಸಂಚಾಲಕ ಜಗದೀಶ ಬಳ್ಳಾರಿ, ಕಾರ್ಯದರ್ಶಿ ಶೇಖರ ಸಿಂಗ್,ಕಿರಣ ರಾಠೋಡ,ಮಿರ್ ಮೊಹಸಿನ,ಸಂಜೀವಕುಮಾರ ಕರಿಕಲ್ ಸೇರಿದಂತೆ ಇತರರು ಅಗ್ರಹಿಸಿದಾರೆ.