ಬಿಪಿಎಲ್ ಕಾರ್ಡುದಾರರ ಖಾತೆಗೆ ನಾಳೆ 170ರೂ.ಜಮೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೯:ಅನ್ನಭಾಗ್ಯ ಯೋಜನೆಯಡಿ ೫ ಕೆಜಿ ಅಕ್ಕಿ ಬದಲು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ತಲಾ ೧೭೦ ರೂ. ನೀಡುವ ವ್ಯವಸ್ಥೆಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು.
ನಾಳೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಕ್ಕಿ ಬದಲು ಹಣ ನೀಡುವ ಯೋಜನೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು, ಮುಂದೆ ಎಲ್ಲ ಬಿಪಿಎಲ್ ಕಾರ್ಡುದಾರರ ಖಾತೆಗೆ ತಲಾ ೧೭೦ ರೂ. ಹಣ ಪಾವತಿಯಾಗಲಿದೆ.
ಅನ್ನಭಾಗ್ಯ ಯೋಜನೆಯಡಿ ೧೦ ಕೆಜಿ ಅಕ್ಕಿ ವಿತರಿಸಲು ಅಕ್ಕಿ ಲಭ್ಯವಿಲ್ಲದ ಕಾರಣ ೫ ಕೆಜಿ ಅಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ನೀಡಲಾಗುತ್ತಿದ್ದು, ಅಕ್ಕಿ ದೊರೆತ ನಂತರ ಅಕ್ಕಿಯನ್ನು ವಿತರಿಸಲಾಗುತ್ತದೆ.
ಪ್ರಸ್ತುತ ರಾಜ್ಯದಲ್ಲಿ ೧೦,೮೯,೮೯೯ ಅಂತ್ಯೋದಯ ಮತ್ತು ೧೧,೭೪೧,೫೬೧ ಬಿಪಿಎಲ್ ಕಾರ್ಡುಗಳಿದ್ದು, ಅನ್ನಭಾಗ್ಯ ಯೋಜನೆಯಡಿ ಒಟ್ಟು ೩೯,೭೬,೪೪೮೯ ಫಲಾನುಭವಿಗಳಿದ್ದಾರೆ ಇವರಿಗೆಲ್ಲ ತಲಾ ೫ ಕೆಜಿ ಅಕ್ಕಿ ಬದಲಿಗೆ ೧೭೦ ರೂ.ಗಳನ್ನು ನಾಳೆಯಿಂದ ನೀಡಲಾಗುತ್ತದೆ.