ಬಿನ್ನಾಭಿಪ್ರಾಯ ಮರೆತು ವಿಜಯೇಂದ್ರಗೆ ಸಹಕಾರ ಅಗತ್ಯ


ಸಂಜೆವಾಣಿ ವಾರ್ತೆ
ಯಲಬುರ್ಗಾ, ನ.28:  ಬಿ.ಜೆ.ಪಿ. ಹೈ ಕಮಾಂಡ ನವರು ಕರ್ನಾಟಕದ ಪ್ರಸ್ತುತ ರಾಜಕೀಯದ ಸಂಪೂರ್ಣ ಚಿತ್ರಣವನ್ನು ಅವಲೋಕಿಸಿ ಆ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿ.ಜೆ.ಪಿ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಮತ್ತು ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಬಿ.ಜೆ.ಪಿ. ಬಲಗೊಳಿಸಲು ಮತ್ತು ವಿಶೇಷವಾಗಿ ಭವಿಷ್ಯದ ಬಿ.ಜೆ.ಪಿ.ಯ ರಾಜಕೀಯ ನೆಲೆಯನ್ನು ಗಟ್ಟಿಗೊಳಿಸಲು ಶಾಸಕ ಬಿ.ವೈ. ವಿಜಯೇಂದ್ರ ರವರಿಗೆ ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಸ್ಥಾನ ನೀಡಿರುವುದು ಸ್ವಾಗತರ್ಹ ಸಂಗತಿಯಾಗಿದ್ದು ಬಿ.ಜೆ.ಪಿ.ಯ ಮುಖಂಡರಾದ ಬಸನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ, ಸಿ.ಟಿ. ರವಿ, ರಮೇಶ ಜಾರಕಿಹೊಳಿ, ರವರು ಬಿನ್ನಾಭಿಪ್ರಾಯ ಮರೆತು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರವರಿಗೆ ಸಂಘಟನೆಯ ದೃಷ್ಟಿಯಲ್ಲಿ ಸಂಪೂರ್ಣ ಸಹಕಾರ ನೀಡಬೇಕೆಂದು ಬಿ.ಜೆ.ಪಿ. ಯ ಹಿರಿಯ ಮುಖಂಡ ಸಿ.ಹೆಚ್. ಪಾಟೀಲ್ ಕರಮುಡಿ ಹೇಳಿದ್ದಾರೆ. ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಮುಖ್ಯವಾಗಿ ಇಂದು ರಾಜ್ಯ ಸರ್ಕಾರ ಕೇವಲ ಆರು ತಿಂಗಳಲ್ಲಿಯೇ ತನ್ನ ದುರಾಡಳಿತದಿಂದ ರಾಜ್ಯದ ಜನತೆಗೆ ಭ್ರಮ ನಿರಸನಗೊಳಿಸಿದೆ. ಮುಖ್ಯವಾಗಿ ಇಂದು ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಬೀಸುತ್ತಿದ್ದು, ಬಿ.ವೈ. ವಿಜಯೇಂದ್ರ ರವರ ಸಾರಥ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ಮೈತ್ರಿಕೂಟ 28 ಕ್ಕೆ 28 ಸ್ಥಾನಗಳನ್ನು ಪಡೆಯುವುದು ಖಚಿತವಾಗಿದ್ದು, ಹೀಗಾಗಿ ಎಲ್ಲಾ ಬಿ.ಜೆ.ಪಿ. ಮುಖಂಡರು ವೈಯುಕ್ತಕ ಹಿತಾಶಕ್ತಿಯನ್ನು ಬದಿಗಿಟ್ಟು ಬಿ.ಜೆ.ಪಿ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಬಿ.ವೈ. ವಿಜಯೇಂದ್ರ ರವರಿಗೆ ಸಹಕಾರ ನೀಡಬೇಕೆಂದು ಬಿ.ಜೆ.ಪಿ. ಹಿರಿಯ ಮುಖಂಡ ಸಿ.ಹೆಚ್.ಪಾಟೀಲ್ ಕರಮುಡಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.