ಬಿದ್ರಿ ಕಲೆ ಬೂತ್ ನಲ್ಲಿ ಮತ ಚಲಾವಣೆ

ಬೀದರ್:ಮೇ.10: ನಗರದ ಹಳೆ ಸೀಟಿಯಲ್ಲಿರುವ ಜಿಲ್ಲಾ ಪಂಚಾಯತ ಅವರಣದಲ್ಲಿ ನಿರ್ಮಿಸಲಾದ ಬಿದ್ರಿ ಕಲಾಕೃತಿಯುಳ್ಳ ಬುತ್ ನಲ್ಲಿ ಬೆಳಂಬೆಳಿಗ್ಗೆ ಮತದಾರರು ಸಾಲಾಗಿ ನಿಂತು ಮತ ಚಲಾಯಿಸಿದರು.
ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಜಿಲ್ಲಾಡಳಿತ ಹಾಗೂ ಸ್ವೀಪ ಸಮಿತಿಯವರು ಈ ವಿನೂತನ ಪ್ರಯೋಗ ಮಾಡಿದರು.
75 ವರ್ಷದ ವೃದ್ಧೆ ಮೆಹರುನ್ನಿಸಾ ಈ ಬೂತ್ ಗೆ ಬಂದು ಮತ ಚಲಾಯಿಸಿರುವುದು ಗಮನಾರ್ಹ ಸಂಗತಿ.