ಕಲಬುರಗಿ,ಜು 8:ಪರಮ ಪೂಜ್ಯ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ನಗರದ ಬಿದ್ದಾಪುರ ಕಾಲೋನಿಯ ನಂಜನಗೂಡು ರಾಘವೇಂದ್ರಸ್ವಾಮಿ ಶಾಖಾಮಠದಲ್ಲಿ ಜಯತೀರ್ಥ ಗುರುಸಾರ್ವಭೌಮರ ಮಧ್ಯಾರಾಧನೆ ಮಹೋತ್ಸವ ಹಾಗೂ ಮಠದ ವರ್ಧಂತಿ ಉತ್ಸವವನ್ನು ನೆರವೇರಿಸಲಾಯಿತು.
ಬೆಳಗ್ಗೆ ಫಲಪಂಚಾಮೃತ, ಪ್ರವಚನ ಜ್ಞಾನಸತ್ರ ಕಾರ್ಯಕ್ರಮ, ಅನ್ನ ಸಂತರ್ಪಣೆ ಸಾಂಗವಾಗಿ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ಮ್ಯಾನೇಜರ್ ಗುರುರಾಜ ಆಚಾರ್ ಕನಕಗಿರಿ, ಶಾಮಾಚಾರ, ಹರೀಶ್, ವ್ಯಾಸರಾಜ್ ಸಂತೆಕೆಲ್ಲೂರ್, ರಾಮದಾಸ್, ಗುರುರಾಜ್ ನವಲಿ, ಅನಿರುದ್ಧ ಕಂಚಿ, ಮತ್ತು ಬಿದ್ದಾಪುರ ಕಾಲೋನಿಯ ಸಮಸ್ತ ಭಕ್ತಾದಿಗಳು ಭಾಗವಹಿಸಿದರು.