‘ಬಿದರಿ’ ದತ್ತಿ ಪ್ರಶಸ್ತಿಗೆ ವೈಕುಂಠ ದತ್ತ ಮಹಾರಾಜರ ಆಯ್ಕೆ

ಬೀದರ:ಡಿ.27: ಜಿಲ್ಲೆಯ ಹಿರಿಯ ಸಂಗೀತ ವಿದ್ವಾಂಸ ವೈಕುಂಠದತ್ತ ಮಹಾರಾಜ್ ಅವರನ್ನು ‘ಬಿದರಿ’, ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆಯ ರಾಜ್ಯಮಟ್ಟದ ಪ್ರಥಮ ಬಿದರಿ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜನವರಿ 3 ರಂದು ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿರುವ ಬಿದರಿ, ಬೀದರ್ ಜಿಲ್ಲೆಯ ಸಾಂಸ್ಕøತಿಕ ವೇದಿಕೆಯ ಕಾರ್ಯಕ್ರಮದಲ್ಲಿ ₹ 15 ಸಾವಿರ ನಗದು ಹಾಗೂ ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ತಾಲ್ಲೂಕಿನ ತಾದಲಾಪುರದ ವೈಕುಂಠದತ್ತ ಮಹಾರಾಜ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಿದರಿ ವೇದಿಕೆಯ ಪದಾಧಿಕಾರಿಗಳು ಹಾಗೂ ಹಿತೈಶಿಗಳು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನ ನೀಡಿದರು.

ಬಿದರಿ ಸಾಂಸ್ಕøತಿಕ ವೇದಿಕೆ ಎರಡು-ಮೂರು ವರ್ಷಗಳಿಂದ ಅನೇಕ ಸಂಗೀತ, ಸಾಹಿತ್ತಿಕ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಕಲೆ ಮತ್ತು ಕಲಾವಿದರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ.
ಇದೀಗ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ನೀಡಲು ಸಹ ಮುಂದೆ ಬರುವ ಮೂಲಕ ಮಾದರಿ ಎನಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ಪ್ರಶಸ್ತಿಗಳು ಪ್ರೇರಣೆ ನೀಡುತ್ತವೆ. ಇನ್ನಷ್ಟು ಸೇವೆಗೆ ಅಣಿಗೊಳಿಸುತ್ತವೆ. ಬಿದರಿ ಸಾಂಸ್ಕøತಿಕ ವೇದಿಕೆ ದತ್ತಿ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಸಂತಸವಾಗಿದೆ ಎಂದು ವೈಕುಂಠದತ್ತ ಮಹಾರಾಜ್ ತಿಳಿಸಿದರು.

ದಕ್ಷಿಣ ಕರಾವಳಿ ಕನ್ನಡ ಸಂಘದ ಸುಬ್ರಹ್ಮಣ್ಯ ಪ್ರಭು, ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯ ವಿಜಯಕುಮಾರ ಸೋನಾರೆ, ಬಾಬುರಾವ್ ದಾನಿ, ಡಾ. ರಾಜಕುಮಾರ ಹೆಬ್ಬಾಳೆ, ಪ್ರಭುಲಿಂಗ ಸ್ವಾಮಿ, ರಾಜೇಶ ಕುಲಕರ್ಣಿ, ಪೃಥ್ವಿರಾಜ್, ಶ್ರೀಮಂತ ಸಪಾಟೆ, ಮಹಾರುದ್ರ ಡಾಕುಳಗಿ, ಸುನೀಲ ಭಾವಿಕಟ್ಟಿ, ಎಂ.ಪಿ ಮುದಾಳೆ, ದೇವಿದಾಸ ಜೋಶಿ, ಸಿದ್ದು ಜಮಾದಾರ್, ಅಪ್ಪಾರಾವ್ ಸೌದಿ ಇದ್ದರು.