ಲಕ್ಷ್ಮೇಶ್ವರ,ಜೂ2 : ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ರೈತರಿಗೆ ಮುಂಗಾರು ಹಂಗಾಮೀನ ಬಿತ್ತನೆ ಬೀಜಗಳನ್ನು ವಿತರಿಸಿದರು.
ಬಳಕ ಮಾತನಾಡಿದವರು ಸರ್ಕಾರ ರೈತರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ಯೋಜನೆಗಳನ್ನು ಜಾರಿಗೆ ತಂದಿದೆ ರೈತರು ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದರು.
ಇದೀಗ ಮುಂಗಾರುಮಳೆ ಲಕ್ಷಣಗಳು ಕಾಣಲಾರಂಬಿಸಿದ್ದು ಭೂತಾಯಿ ನಂಬಿಕೊಂಡಿರುವ ರೈತರನ್ನು ಆ ತಾಯಿ ಎಂದು ಕೈಬಿಡುವುದಿಲ್ಲ ಎಂದು ಆಶಿಸಿದರು ಇದೇ ಸಂದರ್ಭದಲ್ಲಿ ರೈತರಿಗೆ ಮುಂಗಾರು ಹರ್ಷದಾಯಕವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕ ಕೃಷಿ ಸಹಾಯಕ ನಿರ್ದೇಶಕರಾದ ರೇವಣಪ್ಪ ಮನಗೂಳಿ ರೈತ ಸಂಪರ್ಕ ಕೇಂದ್ರದ ಲಕ್ಷ್ಮೇಶ್ವರರ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರಗೌಡ ನರಸಮ್ಮನವರ ಕೆಸಿಸಿ ಬ್ಯಾಂಕ್ ನಿರ್ದೇಶಕರಾದ ಸುನಿಲ್ ಮಹಾಂತ ಶೆಟ್ಟರ್ ಪುರಸಭೆ ಮಾಜಿ ಅಧ್ಯಕ್ಷ ಎಂಆರ್ ಪಾಟೀಲ ಕಿಸಾನ್ ಸಂಘದ ಅಧ್ಯಕ್ಷರಾದ ಟಾಕಪ ಸಾತ್ ಪುತೆ ಸಿಬ್ಬಂದಿಗಳಾದ ಸೋಮಣ್ಣ ಲಮಾಣಿ ಪಿಕೆ ಹೊನ್ನಪ್ಪನವರ ಮತ್ತಿತರ ರೈತ ಮುಖಂಡರು ರೈತರು ಇದ್ದರು.