ಬಿತ್ತನೆ ಬೀಜ ರಸಗೊಬ್ಬರ ಬೆಲೆ ಇಳಿಸುವಂತೆ ಆಗ್ರಹಿಸಿ ಮನವಿ

ಕಾಳಗಿ.ಜೂ.8: ಬಿತ್ತನೆ ಬೀಜ ರಸಗೊಬ್ಬರ ಬೆಲೆ ಇಳಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತದ ಸಂಫದ ಕಾರ್ಯಕರ್ತರು ಕೃಷಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಕಳಪೆ ಹಾಗೂ ಬೀಜ ರಸಗೊಬ್ಬರಗಳ ಮಾರಾಟವನ್ನು ತಡೆಗಟ್ಟಲು ಕೃತಕ ಅಭಾವ ಸೃಷ್ಟಿಸಿ ಕಳಾಸಂತೆ ಮಾರಾಟದ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಬೇಕು. ಬಿತ್ತನೆ ಬೀಜ ರಸಗೊಬ್ಬರ ಬೆಲೆಯನ್ನು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಇಳಿಸಬೇಕು. ರೈತರ ಆತ್ಮಹತ್ಯೆ ತಡೆಗಟ್ಟಲು ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ಒದಗಿಸಬೇಕು. ಬೆಳೆ ವಿಮೆ ಪರಿಹಾರ ಇತ್ಯಾರ್ಥಕ್ಕೆ ಕ್ರಮ ವಹಿಸಬೇಕು.ಬಲವಂತದ ಸಾಲ ವಸೂಲಾತಿ ನಿಲ್ಲಬೇಕು. ಬರ ಪರಿಹಾರ ಹಣವನ್ನು ಸಾಲಕ್ಕೆ ಕಟಾಯಿಸಕೊಳ್ಳಬಾರದು. ಸಾಲಕ್ಕೆ ಬರ ಪರಿಹಾರ ಹಣ ಕಳೆದುಕೊಂಡಿರುವ ರೈತರ ಖಾತೆಗೆ ಹಣ ಮರಳಿಸಲು ಕ್ರಮ ಕೈಗೊಳ್ಳಬೇಕು. ಉದೋಗ್ಯ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಸರಿಯಾದ ಸಮಯಕ್ಕೆ ವೇತನ ಕೊಡಬೇಕು ಮತ್ತು ಉದೋಗ್ಯ ಖಾತ್ರಿ ಯೋಜನೆಯಲ್ಲಿ ಅಡಿಯಲ್ಲಿ ಕೆಲಸ ಕೇಳಿದ ಕೂಲಿಕಾರರಿಗೆ ಸರಿಯಾದ ಸಮಯಕ್ಕೆ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರಾದ ಪರಮೇಶ್ವರ ಕಾಂತಾ, ದಿಲೀಪ್ ನಾಗೂರೆ, ದೇವೀಂದ್ರಪ್ಪ ಪಾಟೀಲ್, ಬಸವರಾಜ ತಳವಾರ್, ಭ್ಯಾಗವಂತ ವಿಶ್ವಕರ್ಮ, ರಾಜು ಚವ್ಹಾಣ, ಉಮೇಶ ಠಾಕೂರ್ ಸೇರಿದನೇ ಅನೇಕರು ಉಪಸ್ಥಿತರಿದ್ದರು.