ಬಿತ್ತನೆ ಬೀಜ, ಗೊಬ್ಬರ ಬೆಲೆ ನಿಯಂತ್ರಿಸುವಂತೆ ಒತ್ತಾಯ

ವಿಜಯಪುರ, ಜು.23-ಬಿತ್ತನೆ ಬೀಜ, ಗೊಬ್ಬರ ಬೆಲೆ ನಿಯಂತ್ರಿಸುವುದು ಹಾಗೂ ಗೊಬ್ಬರ ಅಂಗಡಿಗಳಲ್ಲಿ ಹೆಚ್ಚಿನ ದರಕ್ಕೆಮಾರಾಟ ಮಾಡುವುದನ್ನು ತಡೆಗಟ್ಟುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕ ವಿಜಯಪುರ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಬಿತ್ತನೆ ಬೀಜ ಹಾಗೂ ಗೊಬ್ಬರ ಬೆಲೆ ಸರ್ಕಾರ ಗಗನಕ್ಕೆ ಏರಿಸಿದ್ದು ಪ್ರತಿ ಚೀಲ್ ಡಿ.ಎ.ಪಿ. ಗೆ 1800 ರರೂ. ಅಂತೆ ಮಾರಾಟ ಮಾಡುತ್ತಿದ್ದು ಅದರಂತೆ ಯುರಿಯಾ ಗೊಬ್ಬರ ಪ್ರತಿ ಪಾಕೇಟಿಗೆ 266 ರೂ ಅಂತೆ ಮಾರಾಟಮಾಡಲಾಗುತ್ತಿದೆ. ಸರ್ಕಾರ ನಿಗದಿ ಪಡಿಸಿದ ದರಕ್ಕೆ ಮಾರಾಟ ಮಾಡಿದರೆ ರೈತರಿಗೆ ಹೊರೆ ಆಗುತ್ತದೆ. ಅಂತದ್ದರಲ್ಲಿ ಗೊಬ್ಬರದ ಅಂಗಡಿಯವರು ತಮ್ಮ ಮನಸ್ಸಿಗೆ ಬಂದಂತೆ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ 150 ರೂಪಾಯಿಂದ 200 ರೂಪಾಯಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಮೊದಲೆ ರೈತರಿಗೆ ಸರಿಯಾಗಿ ಮಳೆ ಇಲ್ಲದೇ ಬರಗಾಲದಿಂದ ತತ್ತರಿಸಿದ್ದಾನೆ. ಸರ್ಕಾರ ಬಿತ್ತನೆ ಬೀಜ ಗೊಬ್ಬರ ಹೆಚ್ಚಿಗೆ ಮಾಡಿದ ರೀತಿ ರೈತರು ಬೆಳದಂತಹ ಎಲ್ಲ ಬೆಳಗಳಿಗೆ ರೈತರ ಶ್ರಮಕ್ಕೆ ತಕ್ಕ ಬೆಲೆ ಕೊಟ್ಟಾಗ ಮಾತ್ರರ ರೈತರು ಸಾಲಗಾರರಾಗುವುದಿಲ್ಲ. ಜಮೀನು ಬಿತ್ತನೆ ಮಾಡುವ ಸಂದರ್ಭದಿಂದ ಹಿಡಿದು ಬೆಳೆ ಕಟಾವು ಮಾಡುವರೆಗೂ ಕೃಷಿಗೆ ತಗಲುವ ಎಲ್ಲ ಖರ್ಚು ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ಬೆಲೆ ನಿಗದಿಪಡಿಸಬೇಕು. ಈ ಹಿಂದೆ ಡಾ. ಎಮ್.ಎಸ್. ಸ್ವಾಮೀನಾಥನ್ ಅವರು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ ಇಲ್ಲಿಯವರೆಗೂ ಸರ್ಕಾರ ಸ್ವಾಮೀನಾಥನ್ ವರದಿ ಜಾರಿಗೆ ತರಲು ಹಿಂದೆಟುಹಾಕುತ್ತಿದೆ. ಸ್ವಾಮೀನಾಥನ್ ವರದಿ ಶೀಘ್ರ ಜಾರಿಗೆ ತರಬೇಕು ಇಲ್ಲದಿದ್ದರೆ ಅಖಂಡ ಕರ್ನಾಟಕ ರೈತ ಸಂಘ ಒತ್ತಾಯಿಸುತ್ತದೆ.
ಬಸವನ ಬಾಗೇವಾಡಿ ತಾಲೂಕಿನ ಉಪಾಧ್ಯಕ್ಷರಾದ ಹೊನಕೇರಪ್ಪ ತೆಲಗಿ ಮಾತನಾಡಿ, ರೈತ ಕುಲ ಉಳಿವಿಗಾಗಿ ಸ್ವಾಮೀನಾಥನ್ ಸಲ್ಲಿಸಿದ ವರದಿಯನ್ನು ಸರ್ಕಾರ ಜಾರಿಗೆ ತಂದರೆ ರೈತ ಆತ್ಮಹತ್ಯೆ ತಡೆಗಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದ ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು. ಸರ್ಕಾರ ನಿಗಧಿಪಡಿಸಿದ ದರ ಪಟ್ಟಿಯನ್ನು ಪ್ರತಿಗೊಬ್ಬರ ಅಂಗಡಿಯ ಮುಂದೆ ದರಗಳ ಫಲಕ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಾಲಪ್ಪಗೌಡ ಲಿಂಗದಳ್ಳಿ, ಸಂಗನಗೌಡ ಕೊಳುರ, ಶೇಖಪ್ಪ ಕರಾಬಿ, ಬಾಲಪ್ಪಗೌಡ ಲಿಂಗದಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.