ಬಿತ್ತನೆ ಬೀಜ,ರಸಗೊಬ್ಬರ ಪೂರೈಕೆಗೆ ಒತ್ತಾಯ

ಕೋಲಾರ,ಮೇ.೨೨: ಮುಂಗಾರು ಬಿತ್ತನೆಗೆ ಅವಶ್ಯಕತೆಯಿರುವ ಬಿತ್ತನೆ ಬೀಜ ಗೊಬ್ಬರ ಸಮರ್ಪಕವಾಗಿ ಪೂರೈಕೆ ಮಾಡಿ ಕೊರೋನಾ ಸಂಕಷ್ಟದಲ್ಲಿರುವ ರೈತರ ನೆರವಿಗೆ ದಾವಿಸಬೇಕೆಂದು ರೈತ ಸಂಘದಿಂದ ಕೃಷಿ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಕೊರೋನಾ ಎರಡನೇ ಅಲೆಯ ಆರ್ಭಟಕ್ಕೆ ಇಡೀ ದೇಶವೇ ಅಲ್ಲೋಲ ಕಲ್ಲೋಲವಾಗುತ್ತಿದೆ. ಇದರ ಮದ್ಯದಲ್ಲೂ ಮುಂಗಾರು ಮಳೆ ಈಗಾಗಲೇ ರಾಜ್ಯಕ್ಕೆ ಪ್ರವೇಶ ಮಾಡಿದ್ದು, ರೈತ ಸಮುಧಾಯ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಅಣೆಯಾಗುತ್ತಿವೆ. ಅದರಲ್ಲೂ ಈಗಾಗಲೇ ಆಕಾಲಿಕ ಮಳೆಗಳಾಗಿದ್ದು, ರೈತರು ಈಗಾಗಲೇ ಭೂಮಿ ಹದಗೊಳಿಸುವ ಕಾರ್ಯವು ಶುರುವಾಗಿವೆ. ಮಹಾಮಾರಿ ಸಾಂಕ್ರಾಮಿಕ ರೋಗ ಗ್ರಾಮೀಣ ಪ್ರದೇಶಗಳಲ್ಲಿ ಪ್ರವೇಶ
ಮಾಡಿದ್ದರೂ, ಪ್ರತಿ ವರ್ಷದಂತೆ ಈ ವರ್ಷವೂ ಬರ ಇಲ್ಲವೆ ಭಾರಿ ಮಳೆ ಪ್ರವಾಹದಿಂದ ತತ್ತರಿಸಿರುವ ರೈತರಿಗೆ ಈಗಿನ ಕೊರೋನ ದುರಿತ ಕಾಲದಲ್ಲಿ ಕೃಷಿ ಕಾಯಕವೊಂದೆ ಆಶಾಕಿರಣ ಅಗಾಗಿ ಬಿತ್ತನೆಗೆ ಅವಶ್ಯವಾದ ಬೀಜ ರಸಗೊಬ್ಬರ , ಕೀಟನಾಶಕ, ಸೇರಿದಂತೆ ಎಲ್ಲಾ ಸೌಲತ್ತುಗಳನ್ನು ಸರ್ಕಾರ ಪೂರೈಸಿ ಸಂಕಷ್ಟದಲ್ಲಿರುವ ರೈತರ ಸಹಾಯಕ್ಕೆ ನಿಲ್ಲಬೇಕೆಂದು ಒತ್ತಾಯಿಸಿದರು.
ಕೃಷಿ ಇಲಾಖೆ ಈಗಿಂದಲೇ ಚುರುಕುಗೊಂಡು ಜಿಲ್ಲಾಂದ್ಯಾಂತ ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಯಂತೆ ದಾಸ್ತಾನು ಮಾಡಿ ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆ ಆಗದ ರೀತಿ ಅಧಿಕಾರಿಗಳು ಸ್ಪಂದಿಸುವ ಜೊತೆಗೆ ಕೊರೋನ ನೆಪದಲ್ಲಿ ಕೃಷಿಯನ್ನೆ ನಂಬಿರುವ ರೈತರನ್ನು ನಿರ್ಲಕ್ಷೆ ಮಾಡಬಾರದು ಏಕೆಂದರೆ ಕಳೆದ ವರ್ಷ ಬಿತ್ತನೆ ಸಮಯದಲ್ಲಿ ಅವಶ್ಯಕತೆಗೆ ತಕ್ಕ ಬಿತ್ತನೆ ಬೀಜ, ರಸಗೊಬ್ಬರಆಭಾವದಿಂದ ರೈತರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದರು. ಅದೇ ಮತ್ತೆ ಮರುಕಳಿಸದಂತೆ ಜಾಗೃತಿವಹಿಸಬೇಕೆಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಅಧಿಕಾರಿ ರವಿಕುಮಾರ್ರವರು ಈಗಾಗಲೇ ಬಿತ್ತನೆ ಬೀಜಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಪೊಮ್ಮರಹಳ್ಳಿ ನವೀನ್, ವೇಣು, ಮುಂತಾದವರಿದ್ದರು.