ಬಿಡೆನ್‌ಗೆ ಶ್ವೇತಭವನದ ಹಾದಿ ಸುಗಮ

ವಾಷಿಂಗ್ಟನ್, ನ. ೭- ಅಮೆರಿಕಾದ ಅಧ್ಯಕ್ಷ ಚುನಾವಣೆಯ ಮತ ಎಣಿಕೆ ಮುಂದುವರೆದಿದ್ದು ತೀವ್ರ ಹಣಾಹಣಿ ಏರ್ಪಟ್ಟಿರುವ ರಾಜ್ಯಗಳಲ್ಲಿ ಹಾಲಿ ಅಧ್ಯಕ್ಷ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಿ ಡೆಮಾಕ್ರಟಿಕ್ ಪಕ್ಷದ ಜೋ ಬೀಡೆನ್ ಮುನ್ನೆಡೆ ಕಾಯ್ದುಕೊಂಡಿದ್ದು ಗೆಲುವಿನ ನಗೆ ಬೀರಲು ಸಜ್ಜಾಗಿ ಶ್ವೇತಭವನ ಪ್ರವೇಶಿಸಲು ಅಣಿಯಾಗಿದ್ದಾರೆ.
ಜೋ ಬೀಡೆನ್ ಅವರಿಗೆ ಶ್ವೇತಭವನ ಹಾದಿ ಒಂದೊಂದೇ ರಾಜ್ಯಗಳಲ್ಲಿ ಮೆಟ್ಟಿಲಾಗುತ್ತಿದ್ದು ವಿಶ್ವದ ದೊಡ್ಡಣ್ಣನ ಪಟ್ಟ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
ಈ ಮಧ್ಯೆ ತೀವ್ರ ಪೈಪೋಟಿಯಿಂದ ಕೂಡಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೀಡೆನ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೌಸ್ ಸ್ಪೀಕರ್ ನ್ಯಾನ್ಸಿ ಫೆಲೊಸಿ ತಿಳಿಸಿದ್ದಾರೆ.
ನಿರ್ಣಾಯಕ ರಾಜ್ಯಗಳಲ್ಲಿ ಬೀಡೆನ್ ಮುನ್ನಡೆ ಸಾಧಿಸಿದ್ದು, ನಿಚ್ಚಳ ಬಹುಮತದೊಂದಿಗೆ ೪೬ನೇ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಿದ್ದಾರೆ. ಜೋ ಬೀಡೆನ್ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರೀಸ್ ಶ್ವೇತಭವನ ಪ್ರವೇಶಿಸುವುದು ಖಚಿತವಾಗಿದೆ.
ರಿಪಬ್ಲಿಕನ್ ಪಕ್ಷದ ಹಿಡಿತದಿಂದ ಜಾರ್ಜಿಯಾ ಪೆನ್ಸಿಲ್ವೇನಿಯಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೀಡೆನ್ ಮುಂಚೂಣಿಯಲ್ಲಿದ್ದಾರೆ.
ಇನ್ನು ಹಲವು ರಾಜ್ಯಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿದ್ದು, ಪೆನ್ಸಿಲ್‌ವೇನಿಯಾದಲ್ಲಿ ಗೆಲುವು ಸಾಧಿಸಲು ಮ್ಯಾಜಿಕ್ ಸಂಖ್ಯೆಗೆ ಬೇಕಾದ ೨೭೦ ಮತಗಳನ್ನು ಪಡೆಯಲಿದ್ದಾರೆ. ಈಗ ನಡೆಯುತ್ತಿರುವ ಮತ ಎಣಿಕೆ ಕಾರ್ಯದ ಚಿತ್ರಣವನ್ನು ಗಮನಿಸಿದರೆ ಬೀಡೆನ್ ಗೆಲುವು ಹಾದಿ ಸುಗಮವಾಗಿದೆ. ೨೦೨೦ರಲ್ಲಿ ಮುಂದಿನ ಹೌಸ್ ಸ್ಪೀಕರ್ ಆಯ್ಕೆ ನಡೆಯಲಿದೆ.
ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ಜಾರ್ಜಿಯ ಹಾರಿಜಾನ, ನೇವಾಡಾ ರಾಜ್ಯಗಳಲ್ಲೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬಿಡೆನ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿ ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಅಕ್ರಮದ ಹೆಸರಲ್ಲಿ ಕಾನೂನು ಸಮರ ಸಾರಲು ಮುಂದಾಗಿದ್ದಾರೆ
ಅಮೇರಿಕಾದ ೪೬ ನೇ ಅಧ್ಯಕ್ಷ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಹಲವು ರಾಜ್ಯಗಳಲ್ಲಿ ಇಬ್ಬರು ಅಭ್ಯರ್ಥಿಗಳು ಸಮಬಲದಲ್ಲಿ ಗೆಲುವು ಸಾಧಿಸಿದ್ದು ಇನ್ನೂ ಕೆಲವು ರಾಜ್ಯಗಳಲ್ಲಿ ತೀವ್ರ ಪೈಪೋಟಿ ಹಣಾಹಣಿ ನಡೆಸಿದ್ದಾರೆ.
ಅತಿ ಹೆಚ್ಚಿನ ಮತ
ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ೭ ಕೋಟಿ ೪೦ ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಹೆಗ್ಗಳಿಕೆಗೆ ಜೋ ಬೀಡೆನ್ ಪಾತ್ರರಾಗಿದ್ದಾರೆ
ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿದ್ದ ಜಾರ್ಜಿಯಾ ಪೆನ್ಸಿಲ್ವೇನಿಯಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬೀಡೆನ್ ಮುನ್ನಡೆ ಕಾಯ್ದುಕೊಂಡು ಗೆಲುವಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬೀಡೆನ್ ಅವರು ಶೇ.೦.೬೧ ರ ಸರಾಸರಿಯಲ್ಲಿ ೭೪,೭೯,೫,೩೦೦ ಮತ ಪಡೆದ ಜನಪ್ರತಿನಿಧಿಗಳ ೨೬೪ ಮತ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಗೆಲುವಿಗೆ ಇನ್ನೂ ೬ ಮತಗಳ ಅಗತ್ಯ ಮಾತ್ರ ಇದೆ.
ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶೇ.೪೭,೭೩ರ ಸರಾಸರಿಯಲ್ಲಿ ೭೦,೫೩,೩,೨೦೭ ಮತಗಳನ್ನು ಪಡೆಯುವ ಮೂಲಕ ೨೧೪ ಜನ ಪ್ರತಿನಿಧಿಗಳ ಮತ ಪಡೆದಿದ್ದಾರೆ. ಹೀಗಾಗಿ ಇಬ್ಬರು ಅಭ್ಯರ್ಥಿಗಳ ಗೆಲುವಿಗಾಗಿ ತೀವ್ರ ಸೆಣಸಾಟ ನಡೆಸಿದ್ದಾರೆ.

ಚುನಾವಣಾ ಅಕ್ರಮ
ರಿಪಬ್ಲಿಕನ್ ಪಕ್ಷದ ಹಿಡಿತದಲ್ಲಿರುವ ಹಲವು ರಾಜ್ಯಗಳಲ್ಲಿ ತಾವೇ ಮುನ್ನಡೆ ಕಾಯ್ದುಕೊಂಡಿದ್ದು ಆದರೆ ರಾತ್ರೋರಾತ್ರಿ ಚುನಾವಣಾ ಚಿತ್ರಣ ಬದಲಾಗಿದೆ ಇಂತಹದರ ವಿರುದ್ಧ ಕಾನೂನು ಸಮರ ಸಾರುವುದು ಆಗಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ
ಈ ಸಂಬಂಧ ಟ್ರೀಟ್ ಮಾಡಿರುವ ಅವರು ಮತಎಣಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ರತಿಭಟನೆ
ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಖಚಿತವಾಗುತ್ತಿದ್ದಂತೆ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು ಅಮೆರಿಕದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದು ಕೆಲವಡೆ ಅದು ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆ ರಿಪಬ್ಲಿಕನ್ ಪಕ್ಷದ ಬೆಂಬಲಿಗರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು ರಕ್ತಪಾತದ ಮುನ್ಸೂಚನೆ ನೀಡಲಾಗಿದೆ

:]