ಬಿಡುಗಡೆಯಾಗದ ಬಾಕಿ ಹಣ
ಬಳಕೆಗೆ ಬಾರದ ಜಿಲ್ಲಾ ನ್ಯಾಯಾಲಯ ಕಟ್ಟಡ


ಎನ್.ವೀರಭದ್ರಗೌಡ
ಬಳ್ಳಾರಿ:ಜ,8- ನಗರದ ತಾಳೂರು ರಸ್ತೆಯ ಜಡ್ಜ್ ಬಂಗಲೆ ಬಳಿ 122 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ನೂತನ ಕಟ್ಟಡ ಉದ್ಘಾಟನೆಗೊಂಡು 6 ತಿಂಗಳು ಕಳೆದರೂ ಬಾಕಿ ಹಣಕ್ಕಾಗಿ  ಬಳಕೆಗೆ ದೊರೆತಿಲ್ಲ.
ಐದು ಅಂತಸ್ತುಗಳ ರಾಜ್ಯದಲ್ಲಿಯೇ ಬೃಹತ್ತಾಗಿ ಮತ್ತು ಬಹುತೇಖ  ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ನಿರ್ಮಾಣಗೊಂಡಿರುವ ನ್ಯಾಯಾಲಯಗಳ ಸಂಕೀರ್ಣದ ಕಟ್ಟಡ ಇದು.
ಲೋಕೋಪಯೋಗಿ ಇಲಾಖೆ ಇದನ್ನು ನಿರ್ಮಿಸಿದೆ. 122 ಕೋಟಿ ರೂಗಳಲ್ಲಿ ಸರ್ಕಾರ ಈವರಗೆ 100 ಕೋಟಿ ಬಿಡುಗಡೆ ಮಾಡಿದೆ. ಬಾಕಿ 21.9 ಕೋಟಿ ರೂ ಹಣ ಬಿಡುಗಡೆ ಮಾಡಬೇಕಿದೆ.
ಬಿಡುಗಡೆ ಹಣದಲ್ಲಿ ಕಟ್ಟಡ ಕಟ್ಟಿದೆ. ಕೆಲ ಅಂತಸ್ತಿನಲ್ಲಿ ಮಾತ್ರ ನ್ಯಾಯಾಲಯಕ್ಕೆ ಬೇಕಾದ ಪರ್ನೀಚರ್ಸ್ ಸಿದ್ದವಾಗಿವೆ. ಇನ್ನು ಹಲವುಗಳಿಗೆ ಮಾಡಬೇಕಿದೆ. ಅವಶ್ಯವಾದ ವಿದ್ಯುತ್ ಸಂಪರ್ಕದ ವ್ಯವಸ್ಥೆಯ ಬಾಕಿ ಇದೆ. ಅಲ್ಲದೆ ಇನ್ನಿತರ ಮೂಲಮೂತ ಸೌಲಭ್ಯಗಳ ಕಾಮಗಾರಿಯೂ ಬಾಕಿ ಇದೆಯಂತೆ.
ಅದಕ್ಕಾಗಿ ಕಟ್ಟಡ ಉದ್ಘಾಟನೆಯಾಗಿ ಆರು ತಿಂಗಳು ಕಳೆದರೂ, ಇಲ್ಲಿನ ಹಾಲಿ ಜಿಲ್ಲಾ ನ್ಯಾಯಾಲಯ ಮತ್ತಿತರ ಜಿಲ್ಲಾ ಮಟ್ಟದ ನ್ಯಾಯಾಲಯಗಳನ್ನು ಸ್ಥಳಾಂತರ ಮಾಡಲಾಗಿಲ್ಲ.
ಇಲ್ಲಿ ಇನ್ನು ವಕೀಲರ ಸಂಘದ ಕಟ್ಟಡದ ನಿರ್ಮಾಣ ಕಾರ್ಯವೂ ಇನ್ನೂ ಪ್ರಗತಿಯಲ್ಲಿದೆ. ಹೀಗಿದ್ದರೂ ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಮಾತ್ರ ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ಬಾಕಿ ಹಣ ನೀಡುವಂತೆ ಲೋಕೋಪಯೋಗಿ ಇಲಾಖೆ ಕೇಳಿದೆ. ಆದರೆ ಇನ್ನೂ ಹಣಕಾಸು ಇಲಾಖೆ ಇದಕ್ಕೆ ಮಂಜೂರಾತಿ ನೀಡಿಲ್ಲ. ಮಂಜೂರಾತಿ ನೀಡಿದ ಮೇಲೆ ಕಾಮಗಾರಿ ಆರಂಭಗೊಂಡು ಕಟ್ಟಡ ಉಪಯೋಗಕ್ಕೆ ದೊರೆಯಬೇಕಿದೆ.

ಬಾಕಿ ಹಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೋರಿದೆ. ಬಿಡುಗಡೆ ವಿಳಂಬವಾಗಿದೆ. ಅನುದಾನ ಮಂಜುರಾದ ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡ ಬಳಕೆಗೆ ನೀಡಲಿದೆ.
ಎಸ್.ಪೂಜಾರ್
ಇಇ ಪಿ.ಡಬ್ಲು‌.ಡಿ ಇಲಾಖೆ

ಸರ್ಕಾರ ಆದಷ್ಟು ಬೇಗ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಈಗ ನಿರ್ಮಾಣ ಆಗಿರುವ ಕಟ್ಟಡ ನಿರ್ವಹಣೆ ಇಲ್ಲದೆ ಹಾಳಾಗುವ ಸಾಧ್ಯತೆ ಇದೆ.
ಹೆಚ್.ಎಂ.ಅಂಕಲಯ್ಯ ಮಾಜಿ ಅಧ್ಯಕ್ಷರು. ವಕೀಲರ ಸಂಘ, ಬಳ್ಳಾರಿ.

ನ್ಯಾಯಾಲಯದ ಬಾಕಿ ಕಾಮಗಾರಿಗೆ ಕೂಡಲೇ  ಹಣ ಬಿಡುಗಡೆ ಮಾಡುವಂತೆ ನಾನು ಸದನದಲ್ಲಿ ಮುಖ್ಯ ಮಂತ್ರಿಗಳಿಗೆ ಒತ್ತಾಯ ಮಾಡಿದ್ದೇನೆ. ಆದಷ್ಟು ಬೇಗ ಬಾಕಿ ಹಣ ಬಿಡುಗಡೆಗೆ ಪ್ರಯತ್ನಿಸಲಿದೆ.
ಜಿ.ಸೋಮಶೇಖರ ರೆಡ್ಡಿ
ಶಾಸಕರು ಬಳ್ಳಾರಿ ನಗರ ಕ್ಷೇತ್ರ.

ನ್ಯಾಯಾಲಯದ ಸ್ಟೋರಿಗೆ

ಇತ್ತೀಚೆಗೆ  ಹೈಕೋರ್ಟ್ ನ  ಜಿಲ್ಲೆಯ ಆಡಳಿತಾತ್ಮಕ
ನ್ಯಾಯಾಧೀಶರಾದ ಕೆ.ನಟರಾಜ್ ಅವರು ಅಗಮಿಸಿ ನೂತನ ಕಟ್ಟಡ ವೀಕ್ಷಿಸಿದ್ದು. ಬಾಕಿ ಕಾಮಗಾರಿ ಮುಗಿಸಲು ಅಗತ್ಯ ಅನುದಾನ ತ್ವರಿತಗತಿಯಲ್ಲಿ ಬಿಡುಗಡೆಗೆ ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.
ಬಿ.ರವೀಂದ್ರನಾಥ, ಕಾರ್ಯದರ್ಶಿ ವಕೀಲರ ಸಂಘ, ಬಳ್ಳಾರಿ.