ಬಿಡಿಸಿಸಿ ಬ್ಯಾಂಕ್ ಮೇಲೆ ಸಚಿವ ಸಿಂಗ್ ಕಣ್ಣು ?

ಬಳ್ಳಾರಿ ನ 02 : ಸಚಿವ ಆನಂದ್ ಸಿಂಗ್ ಅವರು ಭವಿಷತ್ತಿನಲ್ಲಿ ಬಿಡಿಸಿಸಿ ಬ್ಯಾಂಕ್ ಅದ್ಇಕಾರದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿ ಇದ್ದಾರ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸಚಿವ ಆನಂದ್ ಸಿಂಗ್ ಅವರು ಅದಕ್ಕಾಗಿ ವೇದಿಕೆಯನ್ನು ಸಿದ್ದ ಮಾಡಿಕೊಳ್ಳುತ್ತಿದ್ದಾರೆ ಎನ್ನುವಂತೆ ಅದಕ್ಕೆ ಪುಷ್ಟಿ ನೀಡುವಂತೆ ಅವರು ಸಹ ಹೊಸಪೇಟೆ ತಾಲೂಕು ಟಿಎಪಿಸಿಎಂಸಿ ಯಲ್ಲಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಸಧ್ಯ ಬಿಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನಗಳಿಗೆ ಚುನಾಚಣೆ ಇಲ್ಲ. ಆದರೆ ಮುಂಬರುವ ಚುನಾವಣೆ ವೇಳೆಗೆ ಟಿಎಪಿಸಿಎಂಸಿ ಯಿಂದ ಬಿಡಿಸಿಸಿ ಬ್ಯಾಂಕ್ ಗೆ ನಿರ್ದೇಶಕರಾಗಲು ಇದು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ಈಗಲೇ ಮುಂದಾಲೋಚನೆ ಮಸಡಿರಬೇಕು ಎನ್ನುತ್ತಿವೆ ಅವರ ಆಪ್ತ ಮೂಲಗಳು ಹೇಳುತ್ತಿವೆ.