ಬಿಡಿಸಿಸಿ ಬ್ಯಾಂಕ್ ಮುಂದೆ ಚಪ್ಪಲಿ ಕ್ಯೂ

ಕೊಟ್ಟೂರು ಜೂ7:ಬೀದಿ ನಲ್ಲಿಗಳಲ್ಲಿ ನೀರಿಗೆ ಖಾಲಿ ಬಿಂದಿಗೆ, ಚೊಂಬು ಇಡುವುದು, ನ್ಯಾಯಬೆಲೆ ಅಂಗಡಿ ಮುಂದೆ ಕೈ ಚೀಲ, ಸೀಮೆ ಎಣ್ಣೆ ಕ್ಯಾನ್‌ ಇಡುವುದು ನೋಡಿದ್ದೇವೆ. ಆದರೆ, ಪಟ್ಟಣದ ಬಿಡಿಸಿಸಿ ಬ್ಯಾಂಕ್‌ ಎದುರು ಬ್ಯಾಂಕ್ ವ್ಯವಹಾರ ನಡೆಸಲು ಸರದಿಗೆ ಇಂದು ಚಪ್ಪಲಿಯನ್ನೇ ಬಿಟ್ಟ ದೃಶ್ಯ ಅಚ್ಚರಿಗೊಳಿಸಿದೆ.
ಹೌದು, ಇಲ್ಲಿನ ಬಿಡಿಸಿಸಿ ಬ್ಯಾಂಕ್‌ ಮುಂದೆ ಇಂದು ಚಪ್ಪಲಿ ಸಾಲನ್ನು ನೋಡಿದ ಕೆಲವರಿಗೆ ಆಶ್ಚರ್ಯ ಉಂಟಾಗಿತ್ತು.ಲಾಕ್ ಡೌನ್ ನಿಂದ ವಾರದಲ್ಲಿ ಕೇವಲ ಎರಡು ದಿನಗಳು ಮಾತ್ರ ವ್ಯವಹಾರಕ್ಕೆ ಸಿಮೀತವಾದ ಹಿನ್ನೆಲೆಯಲ್ಲಿ ಗ್ರಾಹಕರು ಕ್ಯೂ ನಿಲ್ಲುವುದು ಕಂಡುಬರುತ್ತಿದೆ.