ಬಿಡಿಸಿಸಿ ಬ್ಯಾಂಕ್ ಚುನಾವಣೆಕೋಳೂರು ಮಲ್ಲಿಕಾರ್ಜುನಗೌಡ ನಾಮಪತ್ರ ಸಲ್ಲಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಬಿಡಿಸಿಸಿ ಬ್ಯಾಂಕ್ ಗೆ ಈ ತಿಂಗಳು‌ ನಡೆಯುತ್ತಿರುವ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ನಗರದ ಕೋಳೂರು ಮಲ್ಲಿಕಾರ್ಜುನಗೌಡ ಅವರು ನಾಲ್ಕನೇ ಬಾರಿಗೆ ಆಯ್ಕೆ ಬಯಸಿ ಇಂದು ಹೊಸಪೇಟೆಯಲ್ಲಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದ್ದಾರೆ.
ಪತ್ತಿನ ಮತ್ತು ಅರ್ಬನ್ ಬ್ಯಾಂಕುಗಳ ಕ್ಷೇತ್ರದಿಂದ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ  ಅವರ ಬೆಂಲಿಗರಾದ ಜಾನೆಕುಂಟೆ ಎಸ್. ನೇಪಾಕ್ಷಪ್ಪ,  ಎನ್.ಪ್ರಭು, ಜಿ.ಎಂ.ಪರ್ವತೀಶ, ಕೊಟ್ರೇಶ್ ಸ್ವಾಮಿ ಮೊದಲಾದವರು ಇದ್ದರು.