ಬಿಡಿಸಿಸಿ ಚುನಾವಣೆಗೆ ಗೆಲುವು ಖಚಿತ: ಜನಾಲಿ

mde

ಬಾದಾಮಿ, ನ 3- ನ.5 ರಂದು ನಡೆಯಲಿರುವ ಬಿಡಿಸಿಸಿ ಚುನಾವಣೆಗೆ ಸದಸ್ಯರು, ರೈತರ ಒತ್ತಾಯದಿಂದ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ನಾನು ಎರಡನೇ ಬಾರಿಗೆ ಸ್ಪರ್ಧಿಸಿದ್ದು, ಎಲ್ಲ ಪಿಕೆಪಿಎಸ್ ನವರು ಬೆಂಬಲ ಸೂಚಿಸಿದ್ದು, ನನ್ನ ಗೆಲುವು ಖಚಿತ ಎಂದು ಹಾಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳೆಸಾಲವನ್ನು ರೂ.25 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಳ ಮಾಡಿಸಿದ್ದೇನೆ. 2016 ರಲ್ಲಿ ತಾಲೂಕಿಗೆ ಸುಮಾರು 72 ಕೋಟಿ ಬೆಳೆ ಸಾಲ ಮಂಜೂರಿಸಿದ್ದೇನೆ. 2018 ರಲ್ಲಿ 22734 ರೈತರಿಗೆ ರೂ.122 ಕೋಟಿ 46 ಲಕ್ಷ ಸಾಲದಲ್ಲಿ ಇದರಲ್ಲಿ 18875 ರೈತರಿಗೆ ರೂ. 98 ಕೋಟಿ 64 ಲಕ್ಷ ಸಾಲ ಮನ್ನಾ ಮಾಡಿಸಿರುತ್ತೇನೆ. 2015 ರಲ್ಲಿ ಎಲ್ಲ ಮಾಧ್ಯಮಿಕ ಸಾಲ ಒಟ್ಟು 36-37 ಕೋಟಿ ಇತ್ತು. ನಾನು ಬಂದ ಮೇಲೆ ಒಟ್ಟು 251 ರೈತರಿಗೆ 12.93 ಲಕ್ಷ, ಟ್ರ್ಯಾಕ್ಟರ್ ಸಾಲ ಒಟ್ಟು 227 ರೈತರಿಗೆ 15 ಕೋಟಿ 30 ಲಕ್ಷ, ಭೂ ಅಭಿವೃದ್ಧಿ ಸಾಲ ಒಟ್ಟು 96 ರೈತರಿಗೆ 4 ಕೋಟಿ 93 ಲಕ್ಷ, ಕುರಿ ಮತ್ತು ಹೈನುಗಾರಿಕೆ ಸಾಲ 58 ರೈತರಿಗೆ 3 ಕೋಟಿ 29 ಲಕ್ಷ, ಸದರಿ ಒಟ್ಟು 635 ರೈತರಿಗೆ 36 ಕೋಟಿ 16 ಲಕ್ಷ ಕೊಟ್ಟಿರುತ್ತದೆ ಎಲ್ಲ ಸಾಲ ಕೂಡಿದಂತೆ ಒಟ್ಟು ಸುಮಾರು 108 ಕೋಟಿ ಮಂಜೂರಿ ಮಾಡಿಸಿರುತ್ತೇನೆ. ಸಾಲ ಹೊರತುಪಡಿಸಿ ಬಿಡಿಸಿಸಿ ಬ್ಯಾಂಕ್ ನಿಂದ 8 ಪಿಕೆಪಿಎಸ್ ಗಳಿಗೆ 16 ಲಕ್ಷ ಕಟ್ಟಡ ಸಹಾಯಧನ, ಶುದ್ಧ ಕುಡಿಯುವ ನೀರಿನ ಘಟಕಕ್ಕೆ 3 ಪಿಕೆಪಿಎಸ್ ಗಳಿಗೆ 5.50 ಲಕ್ಷ ಸಹಾಯಧನ ಹಾಗೂ ಜಿ.ಪಂ.ಮೂಲಕ ಆರ್.ಡಿ.ಪಿ.ಆರ್. ಯೋಜನೆ ಮೂಲಕ 5 ಪಿಕೆಪಿಎಸ್ ಗಳಿಗೆ 50 ಲಕ್ಷ ಸಹಾಯಧನ ಮಂಜೂರಿ ಮಾಡಿಸಿದ್ದೇನೆ ಎಂದು ತಿಳಿಸಿದರು.
ತಾಲೂಕಿನ ಬೇಲೂರ ಮತ್ತು ನಂದಿಕೇಶ್ವರ ಎರಡು ಶಾಖೆ ಮಂಜೂರಿಸಿದ್ದೇನೆ. ಒಟ್ಟು 6 ಪಿಕೆಪಿಎಸ್ ಪ್ರಾರಂಭಿಸಲು ಶ್ರಮಿಸಿದ್ದೇನೆ. ಕಳೆದ 5 ವರ್ಷಗಳಿಂದ ತಾಲೂಕಿನ ರೈತರ ಅಭಿವೃದ್ಧಿಗಾಗಿ ಪ್ರಮಾಣಿಕ ಹಾಗೂ ನಿಷ್ಪಕ್ಷಪಾತವಾಗಿ ಆರ್ಥಿಕ, ಸಾಮಾಜಿಕ,ಧಾರ್ಮಿಕ ಮತ್ತಯ ಶೈಕ್ಷಣಿಕವಾಗಿ ಶ್ರಮಿಸಿದ್ದೇನೆ. ಮುಂದಿನ ಅವಧಿಗೂ ಹೆಚ್ಚಿನ ಸೇವೆ ಮಾಡಲು ನನಗೆ ಮತ ನೀಡಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಗದೀಶ ಮಲ್ಲಾಪೂರ, ಸಿದ್ದಯ್ಯ ಹಿರೇಮಠ, ಚಂದ್ರಶೇಖರ ಹಿರೇಮಠ, ಬಸವರಾಜ ಹಂಪಿಹೊಳಿಮಠ, ಕುಮಾರ ಪೂಜಾರ, ಕುಮಾರ ಯಡಪ್ಪನ್ನವರ, ಶರಣು ಹೂಗಾರ, ಹನಮಂತ ದೇವರಮನಿ, ಉಮೇಶ ಸುಂಕದ, ಕುಮಾರ ರೋಣದ, ಬಸನಗೌಡ ಗೌಡರ, ಕಳಕನಗೌಡ ಅಯ್ಯನಗೌಡ್ರ ಹಾಜರಿದ್ದರು.
ಬಾಕ್ಸ್-1;
ಬಾದಾಮಿ; ಕಳೆದ ಐದು ವರ್ಷಗಳಿಂದ ಪ್ರಮಾಣಿಕವಾಗಿ, ಪಕ್ಷದ ನಿಷ್ಠೆಯಿಂದ ಕೆಲಸ ಮಾಡಿದ ಕುಮಾರಗೌಡ ಜನಾಲಿ ಇವರಿಗೆ ಪಕ್ಷದ ಟಿಕೇಟ್ ನೀಡದೇ ಇರುವುದು ನಮಗೆಲ್ಲರಿಗೂ ನೋವು ತಂದಿದೆ ಎಂದು ತಾ.ಪಂ.ಸದಸ್ಯ ಕುಮಾರ ರೋಣದ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ರೈತರ, ಪಿಕೆಪಿಎಸ್ ಸದಸ್ಯರಿಗೆ ಸ್ಪಂದಿಸಿ ಎಲ್ಲರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಸಾಲ ಮನ್ನಾ, ಪಿಕೆಪಿಎಸ್ ಸಹಾಯ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಎಲ್ಲ ರೀತಿಯಿಂದ ಸಹಾಯ ಮಾಡಿದ್ದಾರೆ. ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ. ಇವರನ್ನು ಬಿಟ್ಟು ಬೀಳಗಿ ಮತಕ್ಷೇತ್ರದ ವ್ಯಕ್ತಿಗೆ ಟಿಕೇಟ್ ನೀಡಿದ್ದು ಖೇದಕರ ಎಂದು ಹೇಳಿದರು.