ಬಿಡಿಎ ಅಧ್ಯಕ್ಷ ಜಾಬಶೆಟ್ಟಿ ಪದಗ್ರಹಣ

ಬೀದರ್:ಮಾ.1: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಸವರಾಜ ಜಾಬಶೆಟ್ಟಿ ಗುರುವಾರ ಪ್ರಾಧಿಕಾರದ ಕಚೇರಿಯಲ್ಲಿ ಪದಗ್ರಹಣ ಮಾಡಿದರು.
ಪ್ರಾಧಿಕಾರದ ಆಯುಕ್ತ ಶ್ರೀಕಾಂತ ಚಿಮಕೋಡೆ, ಕಚೇರಿ ಸಿಬ್ಬಂದಿ ಇದ್ದರು.
ಸನ್ಮಾನ: ಬಿಡಿಎ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪ್ರಯುಕ್ತ ಜಾಬಶೆಟ್ಟಿ ಅವರನ್ನು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ. ಸಮಿ ಹಾಗೂ ದತ್ತಾತ್ರಿ ಮೂಲಗೆ ಪ್ರಾಧಿಕಾರದ ಕಚೇರಿಯಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.