ಬಿಡಾಡಿ ದನಗಳ ರಸ್ತೆಗೆ ಬಿಡದಂತೆ ಎಚ್ಚರಿಕೆ ವಹಿಸಲು ಸೂಚನೆ 

ಹರಿಹರ ಜು 24;  ನೂರಾರು ಬಿಡಾಡಿ ದನಗಳ ನಿರಂತರ ಹಾವಳಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.ಕೂಡಲೇ  ಮಾಲೀಕರು ತಮ್ಮ  ಹಸುಗಳನ್ನು ರಸ್ತೆಯಲ್ಲೇ ಬಿಡದಂತೆ  ಎಚ್ಚರಿಕೆ ವಹಿಸದಿದ್ದರೆ ನಗರಸಭೆಯಿಂದ ಹಸುಗಳನ್ನು  ಹಿಡಿದು ಗೋಶಾಲೆಗೆ ಕಳಿಸಬೇಕಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಬಸವರಾಜ್ ಐಗೂರು ಹೇಳಿದರು.ರಸ್ತೆಯಲ್ಲಿ ಓಡಾಡುವ ಪಾದಚಾರಿಗಳು ದನಗಳ ಹಾವಳಿಯಿಂದ ಅನೇಕ ಸಂದರ್ಭಗಳಲ್ಲಿ ತೊಂದರೆಗೆ ಸಿಲುಕಿದ್ದಾರೆ. ಅಲ್ಲದೆ ಬಿಡಾಡಿ ದನಗಳು ಏಕಾಏಕಿ ನುಗ್ಗಿದ ಪರಿಣಾಮ ವಾಹನ ಅಪಘಾತಗಳೂ ಸಂಭವಿಸಿದೆ.ಪಟ್ಟಣದ ಮುಖ್ಯರಸ್ತೆಗಳಲ್ಲಿ ತಳ್ಳುವ ಗಾಡಿಗಳ ಹಣ್ಣು ಮತ್ತು ಹೂ ಮಾರಾಟಗಾರರು ಬಿಡಾಡಿ ದನಗಳ ಹಾವಳಿಯಿಂದ ನಷ್ಟ ಅನುಭವಿಸುವಂತಾಗಿದೆ. ಏಕಾಏಕಿ ಹಣ್ಣುಗಳು ಮತ್ತು ಹೂವನ್ನು ದನಗಳು ಮೇಯಲು ಮುಂದಾಗಿ ಬಡ ವ್ಯಾಪಾರಿಗಳು ತೊಂದರೆಯಲ್ಲಿ ಸಿಲುಕಿದ್ದಾರೆ. ಕೆಲವೊಮ್ಮೆ ಮುಖ್ಯರಸ್ತೆಯೇ ಬಿಡಾಡಿ ದನಗಳ ದೊಡ್ಡಿಯಾಗಿ ಪರಿವರ್ತಿತವಾಗಿ ವಾಹನಗಳು ಸಂಚರಿಸುವುದೇ ಕಷ್ಟಕರವಾಗುವಂತಾಗಿದೆ.ಹೆಚ್ಚು ಬಿಡಾಡಿ ದನಗಳಿವೆ. ಬಿಡಾಡಿ ದನಗಳ ಹಾವಳಿ ತಪ್ಪಿಸಲು ನಗರಸಭೆ ಹಲವು ಬಾರಿ  ಹಸು ಮಾಲೀಕರಿಗೆ  ಸಭೆ ಮಾಡಿ ತಿಳುವಳಿಕೆ ಹೇಳಿದರು .ದನಗಳನ್ನು ರಸ್ತೆಗೆ ಬಿಡುತ್ತಿದ್ದಾರೆ ಇದರಿಂದ ವಾಹನ ಸವಾರರಿಗೆ ಸಾರ್ವಜನಿಕರಿಗೆ ಪಾದಚಾರಿಗಳಿಗೆ ಕಿರಿಕಿರಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭೆಯ ವಾಹನದಲ್ಲಿ ನಗರದ 31 ವಾರ್ಡುಗಳಲ್ಲಿ ಧ್ವನಿವರ್ಧಕ ಮೂಲಕ  ಹಸುಗಳ ಮಾಲೀಕರು  ತಮ್ಮ ಹಸುಗಳನ್ನು ವ್ಯಾಪ್ತಿಗೆ ತೆಗೆದುಕೊಳ್ಳದಿದ್ದರೆ ನಗರಸಭೆಯಿಂದ ಕಾರ್ಯಾಚರಣೆ ಮಾಡಿ ಬಿಡಾಡಿ ದನಗಳನ್ನು ಗೋಶಾಲೆಗೆ ಕಳಿಸಲಾಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Attachments area

ReplyForward