ಬಿಡಾಡಿ ಜಾನುವಾರುಗಳಿಗೆ ಮೇವು, ಆಹಾರ


ಹುಬ್ಬಳ್ಳಿ, ಮೇ.30: ಧಾರವಾಡ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಗರದಲ್ಲಿನ ಬಿಡಾಡಿ ಜಾನುವಾರುಗಳಿಗೆ ಪಶು ಇಲಾಖೆಯಿಂದ ಮೇವು ಹಾಗೂ ಆಹಾರ ನೀಡಲಾಯಿತು.
ದಾನಿಗಳು ನೀಡುವ ಹಸಿ ಮೇವು, ಆಹಾರ ಪದಾರ್ಥಗಳನ್ನು ಪಶು ಇಲಾಖೆ ವತಿಯಿಂದ ಸಂಗ್ರಹಿಸಿ ಜಾನುವರುಗಳಿಗೆ ನೀಡಲಾಗುತ್ತಿದೆ. ಇದಕ್ಕಾಗೆ ನೇಮಿಸಿದ ವಾಹನಗಳಲ್ಲಿ ಪಶು ಇಲಾಖೆ ಸಿಬ್ಬಂದಿ ಹುಬ್ಬಳ್ಳಿ ನಗರದ ಬೀದಿ ಬೀದಿಗಳಿಗೆ ತೆರಳಿ ಪಶುಗಳಿಗೆ ಆಹಾರ ಹಂಚುತ್ತಿದ್ದಾರೆ. ಪ್ರಾಣಿಗಳಿಗೆ ಆಹಾರ ನೀಡ ಬಯಸುವ ಹುಬ್ಬಳ್ಳಿ ನಾಗರಿಕರು ಪಶುವೈದ್ಯಾಧಿಕಾರಿ ಹೆಚ್.ವೈ.ಹೊನ್ನಿನಾಯ್ಕರ್ ಅವರ ಮೊಬೈಲ್ ಸಂಖ್ಯೆ 9448692656 ಗೆ ಕರೆ ಮಾಡಬಹುದು.