ಬಿಡಾಡಿ ಕುದುರೆಗಳ ಸೆರೆ

ಕಲಬುರಗಿ ನ 7: ಇಂದು ಹೆದ್ದಾರಿ ಮೇಲೆ ಲಂಗುಲಗಾಮಿಲ್ಲದೇ ಅಲೆಯುತ್ತಿದ್ದ ವಾರಸುದಾರರಿಲ್ಲದ ಹಲವು ಬಿಡಾಡಿ ಕುದುರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆದ್ದಾರಿಗಳ ಮೇಲೆ ಉಂಟಾಗುವ ಸಂಭವನೀಯ ಅಪಘಾತಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ವಶಕ್ಕೆ ಪಡೆದ ಕುದುರೆಗಳನ್ನು ಅನಿಮಲ್ ವೆಲ್‍ಫೇರ್ ಸೊಸೈಟಿಗೆ ಕಳಿಸಲಾಗಿದೆ. ಸಂಚಾರಿ ಠಾಣೆ (2)ಯ ಪಿಐ ಶಾಂತಿನಾಥ ಮತ್ತು ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕ್ರಮ ಕೈಗೊಂಡರು.