ಬಿಟ್ ಕಾಯಿನ್ ದಂದೆ ನಿಯಂತ್ರಣವಾಗದಿದ್ದರೆ ಯುವಜನಾಂಗಕ್ಕೆ ಕಂಟಕ ತಪ್ಪಿದ್ದಲ್ಲ: ಪ್ಯಾಟಿ

ಕಲಬುರಗಿ:ನ.20:ಭಾರತ ದೇಶದಲ್ಲಿ ಈಗ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಕ್ರಿಪೆÇ್ಟೀ ಕರೆನ್ಸಿ ಯುವಸಮುದಾಯಕ್ಕೆ ಮಾರಕವಾಗಿ ಪರಿಣಮಿಸಬಹುದು ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಮರಾವ್ ಪ್ಯಾಟಿ ಹೇಳಿದ್ದಾರೆ .
ಭಾರತ ದೇಶದಲ್ಲಿ ಸಾವಿರಾರು ವರ್ಷಗಳಿಂದ ಸಂತರು ಶರಣರು ಶುದ್ಧ ಕಾಯಕ ಮಾಡಿ ಪ್ರಸಾದ ಉಣಬಡಿಸಿದ ಉದಾರಣೆಗಳಿವೆ. ಶರಣ ಮೋಳಿಗೆ ಮಾರಯ್ಯಗಳ ಸಂಪಾದನೆ ಅರಸನಾದರೂ ಕಾಯಕದಿಂದ ಸಂಪಾದಿಸಿ ದಾಸೋಹಗೈದು ಸವಿಯಬೇಕೆಂಬ ಹಂಬಲ ಸಂತೃಪ್ತಿಯನ್ನು ಸಮರ್ಥಿಸುತ್ತದೆ ಎಂಬ ವಾಣಿಯಂತೆ ನಡೆದಾಡಿದ ನಮ್ಮ ದೇಶ .
ಈಗ ಬಿಟ್ ಕಾಯಿನ್ ಬಗ್ಗೆ ಸದ್ದು ಮಾಡುವುದನ್ನು ಕೇಳಿದರೆ ಆಶ್ಚರ್ಯವಾಗುತ್ತದೆ. ಸತ್ಯವಂತರು ಇದ್ದಲ್ಲಿ ಸುಳ್ಳರು ಇರುತ್ತಾರೆ, ಎಂಬುದನ್ನು ಅರಿತು ನಾವೆಲ್ಲರೂ ಎಚ್ಚರಿಕೆಯಿಂದಿರಬೇಕಾಗುತ್ತದೆ. ವಿಶ್ವದಲ್ಲಿ “ಕರೋನಾ” ಹೇಗೆ ಗಂಭೀರ ರೂಪ ತಾಳಿ ಜಗವೆಲ್ಲ ತಲ್ಲಣಿಸಿದ ಹಾಗೆ ಬಿಟ್ ಕಾಯಿನ್ ಗಂಭೀರ ರೂಪ ತಾಳಬಹುದು. ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸಂಸದಿನಲ್ಲಿ ನಿಯಂತ್ರಣ ಮಾಡುವ ವಿಧೇಯಕ” ಮಂಡಿಸಿ ಯುವ ಜನಾಂಗಕ್ಕೆ ಮಾದರಿ ಆಗುತ್ತಾರೆಂದು ಪ್ಯಾಟಿ ಸಂತಸ ವ್ಯಕ್ತಪಡಿಸಿದ್ದಾರೆ .