ಬಿಟ್ ಕಾಯಿನ್ ಕೈ ಕಮಲ ವಾಕ್ಸಮರ

ಬೆಂಗಳೂರು, ನ. ೧೫- ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ವಾಕ್ಸಮರ ಮುಂದುವರೆದಿದ್ದು, ಬಿಟ್ ಕಾಯಿನ್ ಪ್ರಕರಣ ಗಂಭೀರವಲ್ಲ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಹೇಳುವುದಾದರೆ ಆ ವಿಚಾರವನ್ನು ಪ್ರಧಾನಿ ಬಳಿ ಪ್ರಸ್ತಾಪಿಸಿದ್ದು ಏಕೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಶಾಸಕ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಹಗರಣದಲ್ಲಿ ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿಯಲ್ಲ ಎನ್ನುವುದಾದರೆ ಅವರು ಸಿಡಿಮಿಡಿಗೊಳ್ಳುತ್ತಿರುವುದು ಏಕೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಬಿಟ್ ಕಾಯಿನ್ ಪ್ರಕರಣ ಗಂಭೀರವಲ್ಲ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಹೇಳಿದ್ದಾರೆ. ಹಾಗಾದರೆ ಗಂಭೀರವಲ್ಲದ ವಿಚಾರವನ್ನು ಪ್ರಧಾನಿ ಬಳಿ ಪ್ರಸ್ತಾಪಿಸಿದ್ದು ಏಕೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಿಟ್ ಕಾಯಿನ್ ಪ್ರಕರಣ ಗಂಭೀರವಲ್ಲ ಎನ್ನುವುದಾದರೆ ಸರ್ಕಾರದ ಪರವಾಗಿ ಸಚಿವ ಸುಧಾಕರ್ ಪತ್ರಿಕಾಗೋಷ್ಠಿ ಏಕೆ ನಡೆಸಿದರು, ಪೊಲೀಸರಿಂದ ಪ್ರಕರಣದ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಏಕೆ, ಬಿಜೆಪಿ ನಾಯಕರು ಸಿಡಿಮಿಡಿಗೊಂಡಿದ್ದು ಏಕೆ ಈ ಸರಳ ಪ್ರಶ್ನೆಗಳಿಗೆ ಬಿಜೆಪಿಯಿಂದ ಉತ್ತರವಿಲ್ಲ ಏಕೆ ಎಂದು ಅವರು ಟ್ವೀಟರ್‌ನಲ್ಲಿ ವ್ಯಂಗ್ಯವಾಡಿದ್ದಾರೆ.