ಬಿಟ್ಟು ಬಿಡದೆ ಸುರಿಯುವ ಮಳೆಗೆ ಹಾಳಾದ ಬೆಲೆ ರೈತ ಕಂಗಾಲು.


ಸಂಜೆವಾಣಿ ವಾರ್ತೆ
ಸಿರಿಗೇರಿ. ಆ4. ಗ್ರಾಮೀಣ ಪ್ರದೇಶದಲ್ಲಿ ಕಳೆದ ವಾರದಿಂದ ಅಂಟಿಕೊಂಡಿದ್ದ ಜಡಿ ಮಳೆಗೆ ರೈತರ ಬಹುತೇಕ ಬೆಳೆಗಳು ಒಂದಿಲ್ಲೊಂದು ರೀತಿಯಲ್ಲಿ ಹಾಳಾಗಿವೆ. ಹೆಚ್ಚಿನ ಪಾಲು ಮೆಣಸಿನಕಾಯಿ ಬೆಳೆ ಬೆಳೆದ ರೈತರು ಪ್ರಾರಂಭದಲ್ಲಿಯೇ ಕಷ್ಟ ಎದುರಿಸುವನಂತಾಗಿದೆ. ಎಡೆ ಬಿಡದೆ ದಿನದ ಅತಿಥಿಯಂತೆ ಬರುತ್ತಿರುವ ಮಳೆರಾಯನಿಂದ ಎರೆಡೆರಡು ಸಲ ಬಿತ್ತನೆ ಮಾಡಿ ಕೈಸುಟ್ಟುಕೊಳ್ಳುವಂತಾಗಿದೆ. ಬಿತ್ತಿದ ನಂತರ, ಸಸಿ ನಾಟಿ ಮಾಡಿದ ನಂತರ ಅಂಟಿಕೊಂಡ ಮಳೆಯಿಂದಾಗಿ ಬಿತ್ತಿದ ಬೀಜ ಮೊಳೆಯದೆ, ಹಚ್ಚಿದ ಸಸಿ ತಂಪಿನಿಂದ ಕೊಳೆತು ಇನ್ನೊಮ್ಮೆ ಬಿಟ್ಟುವಂತೆ, ನಾಟಿ ಮಾಡುವಂತಾಗಿದೆ. 500 ರು.ಗೆ ಸೇರು ಮಣಿಸಿನ ಬೀಜ, 30 ಪೈಸೆ ಅಥವಾ 50 ಪೈಸೆಗೆ ಒಂದು ಸಸಿ ದರ ತೆತ್ತು ಡಬ್ಬಲ್ ಖರ್ಚು ರೈತರ ಕೈಕಚ್ಚಿದೆ. ಇನ್ನು ಇದೇ ಪರಿಸ್ಥಿತಿ ಇತರೆ ಬೆಳೆ ನವಣೆ, ಸಜ್ಜೆ, ಹತ್ತಿ, ತೊಗರಿ, ಮೆಕ್ಕೆಜೋಳ, ಜೋಳ ಗಳಿಗೂ ಆಗಿದ್ದು ಈ ವರ್ಷ ಬಿತ್ತನೆಯ ಕಾವು ಕೆಲ ರೈತರಿಗೆ ಎರಡು ಖರ್ಚು ಇಡುವಂತೆ ಮಾಡಿದೆ. ತಗ್ಗು ಪ್ರದೇಶದ ಜಮೀನುಗಳ ಬೆಳೆ ನೀರಿನಲ್ಲಿ ಮುಳುಗಿ, ಅಥವಾ ಕೊಚ್ಚಿಹೋಗಿ ರೈತರನ್ನು ಆತಂಕಕ್ಕೆ ದೂಡಿದೆ. ಒಂದುವಾರ ಬಿಡುವಾದರೆ ಉಳಿದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. ಮುಂಗಾರು ಹಂಗಾಮಿನ ಕೊನೆ ಮಳೆಯಿಂದಾಗಿ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು ಕೆಲ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದ್ದವು. ಈಗ ಮಳೆರಾಯ ಕೆಲದಿನ ಬಿಡುವು ನೀಡಿದರೆ ಪರಿಸ್ಥಿತಿ ಸುಧಾರಿಸಬಹುದೆಂದು ರೈತರು ಅಭಿಪ್ರಾಯ ಹೊಂದಿದ್ದಾರೆ.

Attachments area