ಬಿಟ್ಟಿ ಭಾಗ್ಯಗಳಿಂದ ವಾಣಿಜ್ಯ ವಾಹನ ಚಾಲಕರಿಗೆ ಸಂಕಷ್ಟ

ಕೋಲಾರ, ಸೆ. ೧೪:ಕಾಂಗ್ರೆಸ್ ಸರ್ಕಾರದ ಬಿಟ್ಟಿ ಭಾಗ್ಯಗಳಿಂದಾಗಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ದೌರ್ಭಾಗ್ಯವಂತರಾಗುವಂತಾಗಿದೆ. ರಾಜ್ಯ ಸರ್ಕಾರದ ಅವೈಜ್ಞಾನಿಕ ಮತ್ತು ವಿವೇಕರಹಿತವಾದ ತೀರ್ಮಾನಗಳಿಂದಾಗಿ ವಾಣಿಜ್ಯ ವಾಹನಗಳ ಸಾರಿಗೆ ಉದ್ಯಮಕ್ಕೆ ತುಂಭಲಾರದ ನಷ್ಟಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ವಾಣಿಜ್ಯ ವಾಹನಗಳ ಚಾಲಕರ ಕ್ಷೇಮಾಭಿವೃದ್ದಿ ಟ್ರಸ್ಟ್‌ನ ಅಧ್ಯಕ್ಷ ಕೆ.ವಿ. ಸುರೇಶ್ ಕುಮಾರ್ ಅರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ವಾಹನಗಳ ಚಾಲಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸೆ.೧೧ ರಂದು ಕರೆದಿದ್ದ ಬೆಂಗಳೂರು ಬಂದ್ ಹಾಗೂ ಪ್ರತಿಭಟನೆಯಲ್ಲಿ ಸುಮಾರು ೧೨ ಲಕ್ಷ ವಾಹನಗಳು ಬಂದ್‌ನಲ್ಲಿ ಪ್ರತ್ಯೀಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿ ಬಂದ್ ಕರೆಯನ್ನು ಯಶಸ್ವಿಗೊಳಿಸಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಅವರು ನಮ್ಮ ಮನವಿಯನ್ನು ಸ್ವೀಕರಿಸಿ ಬೇಡಿಕೆಗಳಲ್ಲಿ ಕೆಲವನ್ನು ಈಡೇರಿಸಿದರು, ಇನ್ನು ಕೆಲವು ಬೇಡಿಕೆಗಳ ಈಢೇರಿಕೆಗೆ ನಿಗಧಿತ ಸಮಯವಕಾಶವನ್ನು ತಿಳಿಸದೆ ಜಾರಿಕೆ ಉತ್ತರವನ್ನು ನೀಡಿರುವುದು ಖಂಡನೀಯ ಎಂದರು.
ಓಲ್ವಾ. ಊಬರ್, ಬೈಕ್ ಟ್ಯಾಕ್ಸಿ, ಮತ್ತೀತರೆ ವಾಣಿಜ್ಯ ವಾಹನೇತರ ಸಾರಿಗೆ ಸಂಚಾರಕ್ಕೆ ಕಮೀಷನ್ ಬೇಸಿಸ್ ಅನುಮತಿ ನೀಡುವಂತ ಕಾಪೋರೇಟರ್ ಕಂಪನಿಗಳಿಗೆ ಚಾಲಕರ ಬಗ್ಗೆ ಯಾವೂದೇ ಕಾಳಜಿ ಇಲ್ಲವಾಗಿದೆ ಎಂದು ಹೇಳಿದರು.
ಬೆಂಗಳೂರಿನ ಯಲಹಂಕ ಬಳಿಯಿರುವ ಖಾಸಗಿಯವರ ಲೈಲ್ಯಾಂಡ್ ಮಾಲೀಕತ್ವದ ಸಂಸ್ಥೆಯಲ್ಲಿ ರೂ ೭೫೦ ಗಳ ಶುಲ್ಕ ವಾವತಿಸಿದಲ್ಲಿ ಒಂದು ದಿನ ತರಬೇತು ಪ್ರಮಾಣ ಪತ್ರವನ್ನು ತರುವುದನ್ನು ಕಡ್ಡಾಯ ಮಾಡಿರುವುದು ಅವೈಜ್ಞಾನಿಕತೆಯ ಪರಮಾವಧಿಯಾಗಿದೆ ಎಂದು ಕಿಡಿ ಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷರಾದ ಡಿ.ಎಂ. ವೆಂಕಟೇಶ್, ಬಂಗಾರಪೇಟೆ ಆರ್.ಸುಬ್ರಮಣಿ, ಕೆ.ಜಿ.ಎಫ್. ಏಕಬರಂ, ಶ್ರೀನಿವಾಸಪುರ ಜಗದೀಶ್, ಮಂಜುನಾಥ್. ಅಮ್ಜದ್‌ಖಾನ್, ಲೋಕೇಶ್, ನಾರಾಯಣಸ್ವಾಮಿ, ಕಿಲಾರಿ ಪೇಟೆ ಸಿಂಗ್, ಎಂ.ರಮೇಶ್, ವೇಣುಗೋಪಾಲ್, ಕೆ.ಆರ್. ಜಯಪ್ರಕಾಶ್ ಉಸ್ಥಿತರಿದ್ದರು.