ಬಿಟಿಪಿಎಸ್‍ನ ಎರೆಡು ಘಟಕ ಕಾರ್ಯಾರಂಭ

ಬಳ್ಳಾರಿ 01 : ತಾಲೂಕಿನ ಕುಡತಿನಿ ಬಳಿಯ ಬಳ್ಳಾರಿ ವಿದ್ಯುತ್ ಶಾಖೋತ್ಪನ್ನ ಕೇಂದ್ರ (ಬಿಟಿಪಿಎಸ್)ನಲ್ಲಿ ಕಳೆದ 10 ದಿನಗಳಿಂದ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದ ಮೂರು ಘಟಕಗಳ ಪೈಕಿ ಇಂದು ಎರೆಡು ಘಟಕಗಳು ತನ್ನ ಉತ್ಪಾದನಾ ಕಾರ್ಯವನ್ನು ಕೈಗೊಂಡಿವೆ.
ಲಾಕ್‍ಡೌನ್‍ನಿಂದ ಕೈಗಾರಿಕಗಳು. ಕಚೇರಿಗಳು ಬಂದ್ ಆಗಿರುವುದರಿಂದ ವಿದ್ಯುತ ಬಳಕೆಯ ಬೇಡಿಕೆ ಕುಸಿದ್ದಿದ್ದರಿಂದ. ರಾಜ್ಯ ಸರ್ಕಾರದಿಂದ ಯಾವುದೇ ಬೇಡಿಕೆ ನೀಡದ ಹಿನ್ನೆಲೆಯಲ್ಲಿ ಬಿಡಿಪಿಎಸ್ ಘಟಕಗಳು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದ್ದವು.
ಸಾಮಾಣ್ಯವಾಗಿ ಬೇಸಿಗೆ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಕೊರತೆ ಎದುರಿಸುತ್ತಿತ್ತು ನಮ್ಮ ರಾಜ್ಯ. ಆದರೆ ಕೋವಿಡ್ ಸಂಕಷ್ಟದಿಂದ ವಿದ್ಯುತ್ ಕೊರತೆ ಇಲ್ಲದಾಗಿದೆ.
ಆದರೆ ಹಿಂದಿನ ಎರಡು ವರ್ಷಗಳು ಬೇಸಿಗೆಯಲ್ಲಿ ಕಲ್ಲಿದ್ದಲು ಮತ್ತು ನೀರಿನ ಕೊರತೆಯನ್ನು ಎದುರಿಸುತ್ತಿದ್ದ ಈ ಕೇಂದ್ರದಿಂದ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಬೇಡಿಕೆ ಇರುತ್ತಿತ್ತು. ಈ ವರ್ಷ ಕಲ್ಲಿದ್ದಲೂ ಇದೆ. ನೀರು ಇದೆ. ಆದರೆ ವಿದ್ಯುತ್‍ಗೆ ಬೇಡಿಕೆ ಇಲ್ಲದಂತಾಗಿದೆ. ಇದರಿಂದಾಗಿ ಕಳೆದ ಹತ್ತು ದಿನಗಳ ಕಾಲ ಇಲ್ಲಿನ ಮೂರು ಘಟಕಗಳನ್ನ ವಿದ್ಯುತ್ ಉತ್ಪಾದನೆ ಸ್ಥಗಿತ ಗೊಳಿಸಲಾಗಿತ್ತು.
ಇಲ್ಲಿನ 500 ಮೆಗಾವ್ಯಾಟ್ ಸಾಮರ್ಥ್ಯದ 2, 700 ಮೆಗಾವ್ಯಾಟ್ ಸಾಮಥ್ರ್ಯದ 1 ಒಟ್ಟು ಮೂರು ಘಟಕಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇದರಲ್ಲಿ 500 ಮೆಗಾವ್ಯಾಟ್ ಸಾಮಥ್ರ್ಯದ 1ನೇ ಘಟಕದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದು ದುರಸ್ತಿಯೂ ಮುಗಿದಿದ್ದು. ಟೆಸ್ಟಿಂಗ್ ನಡೆದಿದೆ. ಸರ್ಕಾರ ಈಗ ಬೇಡಿಕೆ ಸಲ್ಲಿಸಿದ್ದು ನಿನ್ನೆಯಿಂದ 3 ನೇ ಘಟಕ ಮತ್ತು ಇಂದಿನಿಂದ 2 ನೇ ಘಟಕ ವಿದ್ಯುತ್ ಉತ್ಪಾದನೆಯ ಕಾರ್ಯ ಆರಂಭಿಸಿವೆ ಎಂದು ಬಿಟಿಪಿಎಸ್‍ನ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮನಾಥ್ ಹೇಳಿದ್ದಾರೆ.