ಬಿಜೆಪಿ 8 ಶಾಸಕರ ಆಯ್ಕೆ ಖಚಿತ-ಮುನಿಸ್ವಾಮಿ

ಕೋಲಾರ, ಏ. ೨೬- ಬಂಗಾರಪೇಟೆಯಲ್ಲಿ ಕಾಂಗ್ರೆಸ್‌ನ ಎಸ್‌ಎನ್.ನಾರಾಯಣಸ್ವಾಮಿ ಅವರನ್ನು ಸೋಲಿಸುವ ಮೂಲಕ ಜಿಲ್ಲೆಯ ಜನಪ್ರಿಯ ಡಿಸಿ ಡಿ.ಕೆ.ರವಿ, ತಹಸೀಲ್ದಾರ್ ಆಗಿದ್ದ ಚಂದ್ರಮೌಳೇಶ್ವರ ಅವರ ಆತ್ಮಕ್ಕೆ ಶಾಂತಿ ನೀಡಲಿದ್ದು, ಅವಿಭಜಿತ ಜಿಲ್ಲೆಯಲ್ಲಿ ಬಿಜೆಪಿಯ ಕನಿಷ್ಟ ೮ ಶಾಸಕರು ಈ ಬಾರಿ ಆಯ್ಕೆಯಾಗಲಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಅವರು, ಡಿ.ಕೆ.ರವಿ ಅವರ ವರ್ಗಾವಣೆಯಾಗಲು ನೇರ ಕಾರಣರಾಗಿ ಅವರ ಸಾವಿಗೆ ಪರೋಕ್ಷ ಕಾರಣರಾದ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಸೋಲಿಸಲು ಬಂಗಾರಪೇಟೆ ಕ್ಷೇತ್ರದ ಜನತೆ ನಿರ್ಧರಿಸಿದ್ದು, ಎಸ್.ಎನ್ ಪಾಪದ ಕೊಡ ತುಂಬಿದೆ ಎಂದರು.
ಬಿಜೆಪಿಯಿಂದ ಸ್ವರ್ಧಿಸಿರುವ ಎಂ.ನಾರಾಯಣಸ್ವಾಮಿ ಅವರು ೪ ಬಾರಿ ಶಾಸಕರಾಗಿದ್ದರೂ ಸಹ ಯಾವೂದೇ ರೀತಿ ಭ್ರಷ್ಟಚಾರ ಇಲ್ಲದೆ ಶುದ್ದವಾದ ಆಡಳಿತ ನೀಡಿದರು. ಇಂದಿಗೂ ಅವರು ರೇಷ್ಮೆ ಹುಳು ಸಾಕಾಣೆ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಅವರಿಗೆ ಇಂದು ಕ್ಷೇತ್ರದ ಜನತೆ ಸಾಥ್ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು,
ರಾಜ್ಯದಲ್ಲಿ ೧೫೦ ಸ್ಥಾನಗಳ ಬರಲಿದ್ದು, ಸ್ವಂತ ಬಲದ ಮೇಲೆ ಬಿಜೆಪಿ ಸರ್ಕಾರ ರಚನೆಯಾಗಲಿದ್ದು,ಇದಕ್ಕೆ ಜನರ ಸಹಮತ ಇರುವುದರಿಂದ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ಕಳೆದ ೧೦ ದಿನಗಳಿಂದ ಸಿರೀಯಲ್ ಮಾದರಿ ಬಿಜೆಪಿ ವಿರುದ್ದ ಆರೋಪ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು ಎಷ್ಟು ಭ್ರಷ್ಟರು ಎಂಬುದು ಜಗಜ್ಗಾಜೀರು ಆಗಿರುವುದರಿಂದಲೇ ಜನತೆ ಇಡೀ ದೇಶದಲ್ಲಿ ಮೂಲೆ ಗುಂಪು ಮಾಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಜಿಲ್ಲಾ ಪ್ರಧಾನಕಾರ್ಯದರ್ಶಿ ಕೃಷ್ಣಮೂರ್ತಿ ಪ್ರಭಾರಿ ಪ್ರಮುಖ್ ಚಿರಂಜೀವಿರೆಡ್ಡಿ, ಕೆ.ಯು.ಡಿ.ಎ.ಅಧ್ಯಕ್ಷ ವಿಜಯಕುಮಾರ್, ಬಿಜೆಪಿ ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮತ್ತಿತರರಿದ್ದರು.