ಲಿಂಗಸುಗೂರು,ಏ.೨೬- ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಟಿಕೇಟ್ ಘೋಷಣೆ ಮಾಡಿದ ನಾಯಕನಿಗೆ ಬಿಜೆಪಿ ಪಕ್ಷದ ಗೆಲುವಿಗೆ ಪಣ ತೊಟ್ಟು ಕ್ಷೇತ್ರದಲ್ಲಿ ಸಂಘಟಿಸುವ ಮೂಲಕ ತಾಲ್ಲೂಕಿನಲ್ಲಿ ಪಕ್ಷದ ಬಾವುಟ ಹಾರಿಸುವ ಮುಖಾಂತರ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಗೆ ಲಿಂಗಸುಗೂರು ಜನತೆ ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಯಾದಗಿರಿ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಹಾಗೂ ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಯಾಗಿದ್ದ ಸುರೇಶ್ ಕೋರೆ ಇವರು ಇಂದು ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ಪಕ್ಷದ ಹೈಕಮಾಂಡ್ ನಾಯಕರು ಹೇಳಿದಂತೆ ನಾನು ಲಿಂಗಸುಗೂರು ತಾಲ್ಲೂಕಿನ ನಮ್ಮ ಯುವ ಘಟಕದ ವತಿಯಿಂದ ಪಕ್ಷದ ಗೆಲುವಿಗೆ ಶ್ರಮಿಸುತ್ತದೆ ಎಂದು ಹೇಳಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರು ಇದುವರೆಗೆ ನನ್ನ ಸಂಪರ್ಕ ಮಾಡದೆ ಇರುವುದು ಖೇದಕರ ವಿಷಯವಾಗಿದೆ.
ನಾನು ಪಕ್ಷದ ಶಿಸ್ತಿನ ಸಿಪಾಯಿ ಪ್ರಮುಖವಾಗಿ ಆರ್‌ಎಸ್‌ಎಸ್ ನ ಸಂಘಪರಿವಾರದ ಮುಖಂಡರು ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದ ನಾಯಕರು ಹೇಳಿದಂತೆ ನಾನು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತದೆ ಎಂದು ನುಡಿದರು.
ಮಾಜಿ ಶಾಸಕ ಮಾನಪ್ಪ ವಜ್ಜಲ್ ಮುಖ್ಯವೋ ಅಥವಾ ಪಕ್ಷದ ಹೈಕಮಾಂಡ್ ಮುಖ್ಯವೋ ಎಂದು ವರದಿಗಾರರು ಪ್ರಶ್ನೆ ಮಾಡಿದಾಗ ಅವರು ತಮ್ಮ ಅನುಭವದ ಪ್ರಕಾರ ತಮ್ಮ ಅನಿಸಿಕೆಗಳನ್ನು ಹೀಗೆ ಹೇಳುತ್ತಾರೆ ನನಗೆ ಪಕ್ಷ ಮುಖ್ಯ ಪಕ್ಷದ ಹೈಕಮಾಂಡ್ ನಾಯಕರು ಹೇಳಿದಂತೆ ನಾನು ಕೇಳುತ್ತೇನೆ ಆದರೆ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರು ನನಗೆ ಮುಖ್ಯವಲ್ಲ ಆದರೂ ಕೂಡ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹೋರಾಟ ಮಾಡುವುದು ನನ್ನ ಕರ್ತವ್ಯ ವಾಗಿದೆ ಎನ್ನುವ ಮೂಲಕ ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಲೋಕೇಶ್, ಹೇಮಂತ್ ಜಾದವ್, ಅನೀಲ ಕುಮಾರ್, ಸಿದ್ದು ಜಾದವ್, ರವಿಕುಮಾರ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.