ಬಿಜೆಪಿ ಹಣದ ಹೊಳೆ ಹರಿಸಿ ಗೆಲುವು ಪಡೆದಿದೆ : ಡಿ.ಬಸವರಾಜ್


ದಾವಣಗೆರೆ.ನ.೧೨; ಶಿರಾ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಉಪಚುನಾವಣೆಯಲ್ಲಿ ಸರಕಾರದ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಹಣದ ಹೊಳೆ ಹರಿಸಿ ಬಿಜೆಪಿ ಗೆಲವು ಸಾಧಿಸಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಜನರ ತೀರ್ಪುನ್ನು ತಲೆಬಾಗಿ ಸ್ವೀಕರಿಸುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಹಲವು ಕಾರಣಗಳಿದ್ದು, ಅವುಗಳಲ್ಲಿ ಜೆಡಿಎಸ್ ಪಕ್ಷ ಎರಡು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ಬಿಜೆಪಿಗೆ ಅನುಕೂಲಕರವಾದ ಅಭ್ಯರ್ಥಿಗಳನ್ನು ಹಾಕಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಆಡಳಿತ ಪಕ್ಷ ಸರ್ಕಾರವಿದ್ದಾಗ ಆ ಪಕ್ಷದ ಅಭ್ಯರ್ಥಿಗಳೇ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಮುಖ್ಯಮಂತ್ರಿಗಳು ಶಿಕಾರಿಪುರದಂತೆ ಶಿರಾವನ್ನು ದತ್ತು ತೆಗೆದುಕೊಂಡು ಅಭಿವೃದ್ದಿ ಪಡಿಸುತ್ತೇನೆ. ೬ ತಿಂಗಳಲ್ಲಿ ಕೆರೆಗೆ ನೀರು ಹರಿಸುವುದಾಗಿ ಭರವಸೆ ನೀಡಿ ಜನರನ್ನು ಭ್ರಮೆಯಲ್ಲಿ ತೆಲಿಬಿಟ್ಟರು. ಮುಖ್ಯಮಂತ್ರಿ ಬಿಎಸ್‌ವೈ ಪುತ್ರ ವಿಜೇಯಂದ್ರ ಮತಕ್ಕೆ ಸಾವಿರ ಎರಡು ಸಾವಿರು ರೂಪಾಯಿ ತನಕ ಹಂಚಿಕೆ ಮಾಡಿದ್ದು ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಬಿಜೆಪಿಗೆ ಈ ಗೆಲವು ತಾತ್ಕಾಲಿಕ. ೨೦೨೩ ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಡಿ.ಬಸವರಾಜ್ ಪತ್ರಿಕಾಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.