ಬಿಜೆಪಿ ಸ್ಪಷ್ಟ ಬಹುಮತ: ಜಯಪ್ರಕಾಶ್ ನಾಯ್ಡು

ಬೇತಮಂಗಲ,ಮೇ.೩- ಬಿಜೆಪಿ ಪಕ್ಷವನ್ನು ಕೆಜಿಎಫ್‌ನಲ್ಲಿ ತಳಮಟ್ಟದಿಂದ ಸಂಘಟಿಸಿದ್ದು, ಈ ಬಾರಿ ರಾಜ್ಯದಲ್ಲಿಯೂ ಬಹುಮತದೊಂದಿಗೆ ಸರ್ಕಾರ ರಚನೆಯಾಗುತ್ತದೆ ಎಂದು ಜಿಪಂ ಮಾಜಿ ಸದಸ್ಯ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ ಜಯಪ್ರಕಾಶ್ ನಾಯ್ಡು ಹೇಳಿದರು.
ಪಟ್ಟಣದ ಬಳಿಯ ಶ್ರೀನಿವಾಸಸಂದ್ರ ಗ್ರಾಪಂಯ ಪೀಲವಾರ ಮತ್ತು ಹಲವು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವಿನಿ ಸಂಪಂಗಿ ಪರವಾಗಿ ಮತಯಾಚಿಸಿ ಮಾತನಾಡಿರು.
ಕೆಜಿಎಫ್‌ನಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಅಭ್ಯರ್ಥಿ ಗೆಲುವು ಸಾಧಿಸುವುದು ಶತಸಿದ್ಧ, ರಾಜ್ಯದಲ್ಲಿಯೂ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಆಡಳಿತ ನಡೆಸಲಿದೆ. ರಾಜ್ಯದ ಜನ ಡಬಲ್ ಇಂಜಿನ್ ಸರ್ಕಾರಗಳ ಸಾಧನೆಗಳನ್ನು ಮನಗೊಂಡು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಬೆಂಬಲ ನೀಡುತ್ತಿದ್ದಾರೆಂದರು.
ಈ ಸಂದರ್ಭದಲ್ಲಿ ಮುಖಂಡ ಬಾಲಕೃಷ್ಣ, ಬಾಬು ರೆಡ್ಡಿ, ರಾಮಕೃಷ್ಣಪ್ಪ, ಜೀಡಮಾಕನಹಳ್ಳಿ ಆಂಜಪ್ಪ, ಹಾಗೂ ಅನೇಕ ಮುಖಂಡರು, ಕಾರ್‍ಯಕರ್ತರು ಉಪಸ್ಥಿತರಿದ್ದರು.