ಬಿಜೆಪಿ ಸೋಲಿಗೆ ಮುನಿಸ್ವಾಮಿ ಹೊಣೆ

ಕೋಲಾರ,ಮೇ,೧೫-ಕೋಲಾರ ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಒಬ್ಬ ಅಭ್ಯರ್ಥಿ ಸಹ ಗೆಲ್ಲದೇ ಇರುವುದಕ್ಕೆ ಸಂಸದ ಎಸ್. ಮುನಿಸ್ವಾಮಿ ನೇರ ಹೊಣೆಗಾರರೆಂದು ಬಿಜೆಪಿ ಮುಖಂಡ ವೈ. ಸುರೇಂದ್ರಗೌಡ ಆರೋಪಿಸಿದರು.
ಮುಳಬಾಗಿಲು ಹೊರವಲಯದ ನರಸಿಂಹತೀರ್ಥ ಬಳಿ ಬಿಜೆಪಿ ಆತ್ಮವಲೋಕನ ಸಭೆಯಲ್ಲಿ ನಿಷ್ಟಾವಂತ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ೮ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಬೆಂಬಲದೊಂದಿಗೆ ಎಸ್.ಮುನಿಸ್ವಾಮಿ ಬಿಜೆಪಿ ಪಕ್ಷದ ಸಂಸದರಾಗಿ ಆಯ್ಕೆಯಾಗಿದ್ದರಿಂದ ಅವರ ಋಣ ತೀರಿಸಲು ಈ ಬಾರಿ ಒಳಒಪ್ಪಂದ ಮಾಡಿಕೊಂಡು ಪಕ್ಷ ದ್ರೋಹ ಕೆಲಸ ಮಾಡಿದ್ದಾರೆಂದು ಟೀಕಾ ಪ್ರಹಾರ ನಡೆಸಿದರು.
ಮುಳಬಾಗಿಲಿನಲ್ಲಿ ಡಾ.ಸರೋಜ ಅಥವಾ ಶೋಭಾರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದರೆ ಸುಲಭವಾಗಿ ಜಯಸಾಧಿಸಬಹುದು ಎಂದು ಎಂ.ಪಿ ಗೆ ಹಲವು ಬಾರಿ ಕೇಳಿಕೊಂಡರು ನಮ್ಮ ಮಾತು ಕೇಳದೇ ಸುಂದರ್‌ಗೆ ಬಿ.ಪಾರಂ ಕೊಡಿಸಿ ಅಭ್ಯರ್ಥಿ ಸೋಲಲು ಮುನಿಸ್ವಾಮಿ ಕಾರಣ ಕರ್ತರಾಗಿದ್ದಾರೆಂದು ದೂರಿದರು.
ಸುಂದರ್ ಹತ್ತಿರ ದುಡಿಲ್ಲ ಕನಿಷ್ಟ ೧೦೦ ಹಳ್ಳಿ ಸಹ ತಿರುಗಿಲ್ಲ ನಂಗಲಿ, ತಾಯಲೂರು, ಬೈರಕೂರು ಮಾತ್ರ ಸುತ್ತಾಡಿದರೆ ಅಭ್ಯರ್ಥಿ ಗೆಲ್ಲಲು ಸಾದ್ಯವೇ ಎಂದು ಪ್ರಶ್ನಿಸಿದರಲ್ಲದೆ ಕೆಜಿಎಫ್, ಬಂಗಾರುಪೇಟೆ, ಮಾಲೂರು ಮತ್ತು ಕೋಲಾರದಲ್ಲಿ ಪಕ್ಷದಲ್ಲೇ ಗುಂಪುಗಾರಿಕೆ ನಡೆಸಿ ಅಭ್ಯರ್ಥಿಗಳು ಸೋಲಲು ಮುನಿಸ್ವಾಮಿನೇ ನೇರ ಹೊಣೆಗಾರರೆಂದು ದೂರಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಮುನಿಸ್ವಾಮಿಗೆ ತಾಲೂಕಿನಲ್ಲಿ ೧ ಲಕ್ಷ ೧೨ ಸಾವಿರ ಮತ ಬಿದ್ದಿತ್ತು ಈ ಬಾರಿ ವಿಧಾನಸಭಾ ಚುನಾವಣೆಗೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೆ ಗೆಲುವು ಸಾಧಿಸಬಹುದಾಗಿತ್ತು, ಆದರೆ ಕೊತ್ತೂರು ಋಣ ತೀರಿಸಲು ಸಂಸದರು ಡಮ್ಮಿ ಅಭ್ಯರ್ಥಿಯನ್ನು ನಿಲ್ಲಿಸಿ ಪಕ್ಷ ಹಾಳಾಗಲು ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.