ಬಿಜೆಪಿ ಸೇರಿದ ಹಗರಿ ಬಸವರಾಜ್

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಡಿ 05 : ಸಾರಿಗೆ ಸಚಿವ ಬಿ.ಶ್ರೀರಾಮುಲು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಗ್ರಾಮೀಣ ಕ್ಷೇತ್ರದ ಮುಖಂಡ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಅವರ  ಸಮ್ಮುಖದಲ್ಲಿ ತಾಲೂಕಿನ ಪಿ.ಡಿ.ಹಳ್ಳಿಯ ಕಾಂಗ್ರೆಸ್ ಮುಖಂಡ ಬಿ.ಬಸವರಾಜ್ (ಹಗರಿ) ಇವರು ಬಿಜೆಪಿ ಪಕ್ಷ ಸೇರಿದ್ದಾರೆ.
ನಗರದ ಸಂಗನಕಲ್ಲು ರಸ್ತೆಯ ಎಂಆರ್ ಕೆ ಪಂಕ್ಷನ್ ಹಾಲ್ ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಬಸವರಾಜ್ ಅವರು ಸಚಿವರಿಗೆ ಮಾಲಾರ್ಪಣೆ ಮಾಡಿ ತಾವು ಬಿಜೆಪಿ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿ ಸೇರುತ್ತಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಓಬಳೇಶ, ಗುರುಲಿಂಗನಗೌಡ, ಉಮೇಶ್ ಮೊದಲಾದವರು ಇದ್ದರು.