ಬಿಜೆಪಿ ಸೇರಿದ ಶಿವಂಗಿ ಗ್ರಾಮದ ಭಜಂತ್ರಿ ಸಮಾಜದ ಮುಖಂಡರು

ಅರಕೇರಾ,ಮಾ.೩೦- ಸಮೀಪದ ಶಿವಂಗಿ ಗ್ರಾಮದ ಭಜಂತ್ರಿ ಸಮಾಜದ ೨೦ಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ಮತ್ತು ಕಾಂಗ್ರೆಸ್ ತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.
ಇಂದು ಪಟ್ಟಣದ ಶಾಸಕರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ತಾಲೂಕಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿ ಶಿವಂಗಿ ಗ್ರಾಮದ ೨೦ಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ಮತ್ತು ಕಾಂಗ್ರೆಸ್ ತೊರೆದು ಶಾಸಕ ಕೆ.ಶಿವನಗೌಡ ನಾಯಕ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಪಕ್ಷದ ಯುವ ಮುಖಂಡರಾದ ಭಗವಂತ್ರಾಯ ನಾಯಕ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಶಾಸಕರಾದ ಕೆ.ಶಿವನಗೌಡ ನಾಯಕ ಅವರು ನೂತನ ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ವಿರಕ್ತಾನಂದ, ಅಮಾತೆಪ್ಪ, ಹನುಮಂತ, ಗ್ಯಾನಪ್ಪ, ಹನುಮಂತ, ಕರಿಯಪ್ಪ, ರಾಮಣ್ಣ, ಆಂಜನೇಯ, ಮಾರುತಿ, ವೆಂಕಟೇಶ, ಮಂಜಪ್ಪ, ಬಸವರಾಜ, ನೀಲಪ್ಪ, ಸಂಜೀವಪ್ಪ, ತಿಪ್ಪಣ್ಣ, ಅಮರೇಶ ಸೇರಿದಂತೆ ಅನೇಕರು ಇದ್ದರು.