ಬಿಜೆಪಿ ಸುಳ್ಳಿಗೆ ಸದಸ್ಯರು ಮಾರುಹೋಗಬಾರದು-ಎನ್.ಎಸ್.ಬಿ

ಸಿರವಾರ.ಡಿ೩- ಕೇಂದ್ರ -ರಾಜ್ಯದಲ್ಲಿ ಅದಿಕಾರದಲ್ಲಿರುವ ಬಿಜೆಪಿ ಸರ್ಕಾರವು ಮಾಡಿದೆ ಆಟವಾಗಿದ್ದೂ, ಮತದಾರರಿಗೆ ಸುಳ್ಳಿನ ಸರಮಾಲೆಯನ್ನೆ ಹೇಳುತಾ ಕಾಲಹರಣ ಮಾಡುತ್ತಿದೆ. ಗ್ರಾಮಪಂಚಾಯತಿ ಸದಸ್ಯರು ಅದಕ್ಕೆ ಮಾರುಹೋಗದೆ ಕಾಂಗ್ರೇಸ್ ಅಭ್ಯರ್ಥಿಯಾದ ಶರಣಗೌಡ ಬಯ್ಯಾಪೂರು ಅವರಿಗೆ ಮತ ನೀಡಬೇಕು ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಎನ್.ಎಸ್.ಭೋಸರಾಜು ಹೇಳಿದರು.
ತಾಲೂಕಿನ ನವಲಕಲ್, ಮಲ್ಲಟ, ಹೀರಾ, ಚಿಂಚರಕಿ ಸೇರಿದಂತೆ ಇನ್ನಿತರ ಗ್ರಾ.ಪಂಚಾಯತಿಗಳ ಸದಸ್ಯರಲ್ಲಿ ಎಂ.ಎಲ್.ಸಿ ಚುನಾವಣೆ ಅಂಗವಾಗಿ ಮಾಜಿ ಶಾಸಕ ಜಿ.ಹಂಪಯ್ಯನಾಯಕರೊಂದಿಗೆ ಪ್ರಚಾರ ಹಾಗೂ ಮತಯಾಚನೆ ಮಾಡಿ ಮಾತನಾಡಿದ ಅವರು, ಬಿಜೆಪಿ ಒಂದೇ ಒಂದು ಅಭಿವೃದ್ದಿ ಕೆಲಸಗಳನ್ನು ಮಾಡಿಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದರೆ ಗ್ರಾಮಪಂಚಾಯತಿ ಅದ್ಯಕ್ಷರಿಗೆ ಕಾರು, ಸದಸ್ಯರಿಗೆ ಮಾಸಿಕ ೧೦ ಸಾವಿರ ಸಹಾಯ ಧನ ನೀಢಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ ಅದು ಅಸಾದ್ಯದ ಮಾತಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅವರದೆ ಸರ್ಕಾರ ಇದೇ ಅದನ್ನು ಜಾರಿಗೆ ತಂದು ಚುನಾವಣೆಗೆ ಬರಬೇಕಾಗಿತು. ಗ್ರಾಮಪಂಚಾಯತಿಗೆ ನರೇಗ ಯೋಜನೆ ಜಾರಿಗೆ ತಂದಿರುವುದು ಹಿಂದಿನ ಯುಪಿಎ ಸರ್ಕಾರ, ಹೆಚ್ಚಿನ ಅನುದಾನವನ್ನು ನೀಡಿರುವುದು ಅದೇ ಸರ್ಕಾರ ಇಂದು ಸದಸ್ಯ ಗ್ರಾಮೀಣ ಅಭಿವೃದ್ದಿಯಾಗುತ್ತಿರುವುದು ಅದೇ ಅನುದಾನದಲ್ಲಿ. ಆದರಿಂದ ಬಿಜೆಪಿ ನೀಡುವ ಆಶ್ವಾಸನೆಗಳಿಗೆ ಮಾರುಹೋಗದೆ ನಮ್ಮ ಅಭ್ಯರ್ಥಿಯಾದ ಶರಣಗೌಡ ಬಯ್ಯಾಪೂರಿಗೆ ಮತನೀಡಿ ಎಂದರು.
ಮಾಜಿ ಶಾಸಕ ಜಿ.ಹಂಪಯ್ಯನಾಯಕ ಮಾತನಾಡಿ ಬಿಜೆಪಿ ಸುಳ್ಳು ಈಗ ನಡೆಯುವುದಿಲ್ಲ, ಜನರಿಗೆ ಅವರು ಮಾಡುವ ಮೋಸ ತಿಳಿದಿದೆ. ಚುನಾವಣೆಯಲ್ಲಿ ಭಾವಾತ್ಮಕ ವಿಷಯಗಳನ್ನು ಮುಂದೆ ಇಟ್ಟುಕೊಂಡು ಚುನಾವಣೆ ಗೆಲುತ್ತಾರೆ ಅಂತಹ ಆಶ್ವಾಸನೆಗಳಿಗೆ ಮಾರುಹೋಗಬಾರದು ಎಂದರು.
ಕಾರ್ಯಕ್ರಮ ಪೂರ್ವದಲ್ಲಿ ನವಲಕಲ್ ಬೃಹನ್ಮಠ ಶ್ರೀಶಾಂಭವಿದೇವಿ ದರ್ಶನ ಪಡೆದರು. ಅಭ್ಯರ್ಥಿ ಶರಣಗೌಡ ಬಯ್ಯಾಪೂರು, ಸಿರವಾರ ತಾಲೂಕ ಅಧ್ಯಕ್ಷ ಚುಕ್ಕಿ ಶಿವಕುಮಾರ, ತಾ.ಪಂ ಮಾಜಿ ಅಧ್ಯಕ್ಷ ದಾನನಗೌಡ, ರಮೇಶ ದರ್ಶನಕರ್, ಬ್ರೀಜೇಶ ಪಾಟೀಲ್,ಶರಣಯ್ಯನಾಯಕ ಗುಡದಿನ್ನಿ, ಶಿವಶರಣ ಸಾಹುಕಾರ ಅರಕೇರಿ,ಅಯ್ಯನಗೌಡಜಂಬಲದಿನ್ನಿ, ಎಪಿಎಂಸಿ ಮಾಜಿ ಅದ್ಯಕ್ಷ ಭೀರಪ್ಪಕಡದಿನ್ನಿ, ಜಿ.ಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ತಾ.ಪಂ ಮಾಜಿಸದಸ್ಯರಾದ ಮಲ್ಲಿಕಾರ್ಜುನ ಮಲ್ಲಟ, ಶ್ರೀಧರಗೌಡ ಹೀರಾ, ಹನುಮಂತ್ರಾಯ ಮುರ್ಕಿಗುಡ್ಡ, ದೇವಣ್ಣನವಲಕಲ್, ಶರಣಬಸವ.ದನಂಜಯ್ಯ, ಯುವಘಟಕದ ಅಧ್ಯಕ್ಷ ಅಂಬು, ನಾಗರಾಜ ಚಿನ್ನಾನ್, ಸೂರಿ ದುರಗಣ್ಣನಾಯಕ, ರಾಜಮಹ್ಮದ್, ರವಿಕುಮಾರ ಶೇಷಯ್ಯ, ನಾಗಪ್ಪ ಸೇರಿದಂತೆ ಇನ್ನಿತರರು ಇದ್ದರು.