ಬಿಜೆಪಿ ಸಾಮೂಹಿಕ ಕೊಲೆಯ ಇತಿಹಾಸವಿದೆ


ಕೋಲ್ಕತ್ತಾ,ಏ.೨೫-ತೃಣಮೂಲ ಕಾಂಗ್ರೆಸ್ -ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕ ಕುನಾಲ್ ಘೋಷ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, “ಬಿಜೆಪಿಗೆ ಸಾಮೂಹಿಕ ಹತ್ಯೆ ಮತ್ತು ಕೊಲೆಯ ಸುದೀರ್ಘ ಇತಿಹಾಸವಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಅವರು “ಬಿಜೆಪಿಗೆ ಸಾಮೂಹಿಕ ಹತ್ಯೆ ಮತ್ತು ಕೊಲೆಯ ಇತಿಹಾಸವಿದೆ, ಆದ್ದರಿಂದ ಅವರು ಬೇರೆ ಪಕ್ಷದ ಮೇಲೆ ಕೆಸರು ಎರಚುವ ಮೂಲಕ ತಮ್ಮನ್ನು ತಾವು ಶುದ್ಧರು ಎಂದು ತೋರಿಸಲು ಸಾಧ್ಯವಿಲ್ಲ ಎಂದು ಹರಿಹಾಯ್ದಿದ್ದಾರೆ

ಈ ಹಿಂದೆ ಮಮತಾ ಬ್ಯಾನರ್ಜಿ ವಿರುದ್ಧ ಮತ್ತು ಅಭಿಷೇಕ್ ಬ್ಯಾನರ್ಜಿ ವಿರುದ್ಧ ದಾಳಿಗಳು ನಡೆದಿವೆ. ಅದನ್ನು ಪೊಲೀಸರು ತಡೆದಿದ್ದಾರೆ, ಇಂತವರು ಪರಿಶುದ್ಧರು ಎಂದು ತೋರಿಸಿಕೊಳ್ಳುವ ಅಗತ್ಯವಿಲ್ಲ ಎಂದಿದ್ಧಾರೆ.

ಲೋಕಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಮತ್ತು ಟಿಎಂಸಿಯನ್ನು ಸೋಲಿಸಲು ಸಾಧ್ಯವಾಗದೆ ಕೊಲೆ ಯತ್ನದ ತಂತ್ರಗಳಾಗಿವೆ ಎಂದು ಹೇಳಿದ್ದಾರೆ.

“ಇದು ರಾಜಕೀಯದ ವಿಷಯವಲ್ಲ, ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಮತ್ತು ಟಿಎಂಸಿ ವಿರುದ್ಧ ಗೆಲ್ಲಲು ಸಾಧ್ಯವಾಗದವರು ದಾಳಿ ಮಾಡಲು ಬೇರೆ ಮಾರ್ಗವನ್ನು ಹುಡುಕುತ್ತಿದ್ದಾರೆ. ಬಂಧಿತ ವ್ಯಕ್ತಿ ದೊಡ್ಡ ಪಿತೂರಿಯತ್ತ ಸುಳಿವು ನೀಡಿದ್ದಾರೆ” ಎಂದು ಹೇಳಿದ್ದಾರೆ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನಾಯಕರೊಬ್ಬರು ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಕೊಲ್ಲಲು ಬಯಸಿದ್ದರು ಎಂದು ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ

“ಬಿಜೆಪಿಯಲ್ಲಿರುವ ಗದ್ದರ್ ಗಳಲ್ಲಿ ಒಬ್ಬರು ಸ್ಫೋಟಕ ಬಳಸಲು ಉದ್ದೇಶಿಸಿದ್ದರು. ನಿಮಗೆ ನನ್ನ ವಿರುದ್ಧ ದ್ವೇಷವಿದ್ದರೆ ನಿಮಗೆ ಬೇಕಾದಷ್ಟು ಬಾಂಬ್ ಸ್ಫೋಟಿಸಿ. ಆದರೆ ನೀವು ಅಭಿಷೇಕ್‌ನನ್ನು ಕೊಲ್ಲಲು ಯಾಕೆ ಪ್ರಯತ್ನಿಸಿದ್ದೀರಿ ಎಂದು ಬಿಜೆಪಿ ವಿರುದ್ದ ನೇರ ವಾಗ್ದಾಳಿ ನಡೆಸಿದ್ಧಾರೆ