ಬಿಜೆಪಿ ಸಾಧನೆ ತಿಳಿಸುವ ವಿಜಯ ಸಂಕಲ್ಪ ಯಾತ್ರೆ ಶಹಾಬಾದ ನಗರಕ್ಕೆ ನಾಳೆ

ಶಹಾಬಾದ್:ಮಾ.6:ವಿಜಯ ಸಂಕಲ್ಪ ಯಾತ್ರೆಯ ಮೂಲಕ ಜನರ ಆಶೀರ್ವಾದ ಪಡೆದು ಕರ್ನಾಟದಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು. ಅವರು ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ವಿಜಯ ಸಂಕಲ್ಪಯಾತ್ರೆಯ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಜನ ಕಲ್ಯಾಣ ಮಾಡಿದ್ದೇವೆ. ಜನರ ಬದುಕಿಗೆ ಅಗ್ಯವಾದ ಎಲ್ಲ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಜನಮನ ಗೆಲ್ಲುವ ವಿಶ್ವಾಸವಿದೆ. ವಿಜಯ ಸಂಕಲ್ಪ ಯಾತ್ರೆಯಿಂದ ನಮ್ಮ ಆತ್ಮವಿಶ್ವಾಸ, ಶಕ್ತಿ ಇಮ್ಮಡಿಯಾಗಿದೆ. ಜನ ಸಂಕಲ್ಪದಿಂದ ವಿಜಯ ಸಂಕಲ್ಪದಿಂದ ದಿಗ್ವಿಜಯವನ್ನು ಬಿಜೆಪಿ ಸಂಪಾದಿಸಲಿದೆ ಎಂದು ಹೇಳಿದರು. ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಬಿನ್ನಾಡೆ ಮಾತನಾಡಿದರು. ಗ್ರಾಮೀಣ ಪ್ರಭಾರಿ ಶರಣಪ್ಪ ತಳವಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಬಗಲಲಿ, ಲಿಂಗರಾಜ ಬಿರಾದರ, ಗ್ರಾಮೀಣ ಮಂಡಲ ಅಧ್ಯಕ್ಷ ಸಂಗಮೇಶ ವಾಲಿ, ನಗರ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಕಾಡಾ ಅಧ್ಯಕ್ಷ ಹರ್ಷವರ್ಧನ ಗುಗ್ಗಳೆ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಮಾಲಿಪಾಟೀಲ್, ಪ್ರವೀಣ ಮುಚ್ಚಟ್ಟಿ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ವೇದಿಕೆಯಲ್ಲಿದ್ದರು. ಸಭೆಯ ಮೊದಲು ಜಗದ್ಗುರು ರೇಣುಕಾಚಾರ್ಯ ಅವರ ಜಯಂತಿ ನಿಮಿತ್ತ ಪೂಜೆ ಸಲ್ಲಿಸಿದರು. ಮಂಡಲ ಪದಾಧಿಕಾರಿಗಳು, ಪ್ರಮುಖರು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು, ಪ್ರಭಾರಿಗಳು, ಶಕ್ತಿಕೇಂದ್ರದ ಪ್ರಮುಖರು, ಯಾತ್ರೆಯ ವಿವಿಧ ತಂಡಗಳ ಸದಸ್ಯರು ಪಾಲ್ಗೊಂಡಿದರು.